ಮಹಾಂತೇಶ ಕೌಜಲಗಿ ಅವರ ಹುಟ್ಟು ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಾಲು ವಿತರಣೆ.
ಬೆಳಗಾವಿ:ಬೈಲಹೊಂಗಲ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮುರಗೋಡ ಗ್ರಾಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕೌಜಲಗಿ ಅವರ 47ನೇ ಹುಟ್ಟು ಹಬ್ಬದ ಪ್ರಯುಕ್ತ ಮುರಗೋಡದ ಮಹಾಂತೇಶ ಕೌಜಲಗಿ ಅಭಿಮಾನಿ ಬಳಗದ ವತಿಯಿಂದ ಮುರಗೋಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಾನಂತಿಯರಿಗೆ,ರೋಗಿಗಳಿಗೆ ಹಾಗೂ ಪಾಟೀಲ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು,ಹಣ್ಣು-ಹಂಪಲ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳಿಯ ಪಿಕೆಪಿಎಸ್ ಅಧ್ಯಕ್ಷರಾದ ಕು. ಗೀತಾತಾಯಿ ದೇಸಾಯಿ, ಕಾಂಗ್ರೆಸ್ಸ್ ಮುಖಂಡರುಗಳಾದ ಸೋಮಶೇಖರ್ ಪಟ್ಟಣಶೆಟ್ಟಿ,ಶಿವಬಸಪ್ಪ ತೊಲಗಿ,ಶಿವನಗೌಡ ಪಾಟೀಲ, ಬಾಬುರಾವ್ ಕಡಲಾಸ್ಕರ ಘಟ್ಟೇಪ್ಪ ರಗಟಿ ಸೇರಿದಂತೆ ಅನೇಕ ಮುಖಂಡರು,ಕಾರ್ಯಕರ್ತರು ಉಪಸ್ಥಿತರಿದ್ದರು.
-ಗುರು ಎಸ್ ಎ.