UK Suddi
The news is by your side.

ಶತಮಾನ ಸಂಭ್ರಮಕ್ಕೆ ಸಜ್ಜಾದ ಸಿದ್ದೇಶ್ವರ ಜಾತ್ರೆ.

ಒಬ್ಬರ ಮನವ ನೋಯಿಸಿ, ಒಬ್ಬರ ಮನವ ಘಾತವ ಮಾಡಿ, ಗಂಗೆಯ ಮುಳುಗಿದಡೇನಾಗುವುದಯ್ಯ? ಚಂದ್ರನು ಗಂಗೆಯ ತಡದಲ್ಲಿದ್ದಡೇನಾಗುವುದಯ್ಯ? ಕಳಂಕ ಬಿಡದಾಯಿತ್ತಯ್ಯ ಅದು ಕಾರಣ, ಮನವ ನೋಯಿಸದವನೆ, ಒಬ್ಬರ ಘಾತವ ಮಾಡದವನೆ, ಪರಮಪಾವನ ನೋಡಾ, ಕಪಿಲಸಿದ್ದಮಲ್ಲಿಕಾರ್ಜುನಾ.
               ‌  

12ನೇ ಶತಮಾನದಲ್ಲಿ ಹಲವಾರು ಶರಣರು ಮನುಜ ಕುಲದ ಅಭ್ಯುದಯಕ್ಕಾಗಿ, ಈ ಧರೆಯ ಏಳಿಗೆಗಾಗಿ ಶ್ರಮಿಸಿದ್ದಾರೆ. ತಮ್ಮ ಅತ್ಯಮುಲ್ಯ ವಚನ ಸಾಹಿತ್ಯದ ಮೂಲಕ ಸಮಾನತೆ, ಸಾಮಾಜಿಕ ಕಾಳಜಿ ಕಾಯಕ ತತ್ವ ದಾಸೋಹ ಆದರಿಸಿ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಇವರ ಸಾಲಲ್ಲಿ ಕರ್ಮಯೋಗಿ ಸಿದ್ದರಾಮರೂ ಕೂಡ ಒಬ್ಬರು. ಆರಾದ್ಯದೈವ ಶ್ರೀ ಕಪಿಲ ಸಿದ್ದಮಲ್ಲಿಕಾರ್ಜುನನ ಅಂಕಿತನಾಮದಿಂದ ಸಹಸ್ರ ವಚನಗಳನ್ನು ರಚಿಸಿದ್ದಾರೆ.
ಈಗಿನ ಮಹಾರಾಷ್ಟ್ರದ ಸೊಲ್ಹಾಪುರ ಆಗಿನ ಸೊನ್ನಲಗಿಯಲ್ಲಿ ಮುದ್ದಗೌಡ ಮತ್ತು ಸುಗ್ಗಲಾದೇವಿ ಪುತ್ರನಾಗಿ ಕ್ರಿ.ಶ 1165ರಲ್ಲಿ ಜನಿಸಿದರು.

ಶಿವತತ್ವ ಪ್ರಾಚಾರಕ್ಕಾಗಿ ಸಿದ್ದಾನಾಗಿ ಬಂದಿದ್ದ ಸಿದ್ದೇಶ್ವರ ಬಾಲ್ಯದಲ್ಲಿ ವಿಶಿಷ್ಠ ಶಾಂತ ಸ್ವಭಾವದವನಾಗಿದ್ದ ಎಲ್ಲರಂತೆ ಎಲ್ಲರೊಡನೆ ಬೆರೆಯುವ ಗುಣ ಇರಲಿಲ್ಲ ಹಾಗಾಗಿ ಇವನನ್ನು ಬುದ್ದಿಮಾಂದ್ಯ ಎಂದೂ ಕರೆಯುತ್ತಾರೆ.

ಮಗನ‌ ಈ ಪರಿಸ್ಥಿತಿ ಅರಿತು ಪರಿಸರದೊಂದಿಗೆ ಬೆರೆಯಲು ದನ ಕಾಯಲು ಕಳುಹಿಸುತ್ತಾನೆ. ಪ್ರತಿದಿನ ದನಕಾಯುವುದು ಸಿದ್ದರಾಮನ ಕಾಯಕವಾಯಿತು. ದನಗಳನ್ನು ಮೇಯಲುಬಿಟ್ಟು ತಾನು ಶಿವಧ್ಯಾನಾಸಕ್ತನಾಗುತ್ತಿದ್ದ.

            

ಸಿದ್ದರಾಮ ದ್ಯಾನಿಸುತ್ತಿದ್ದ ವೇಳೆ ಮುಪ್ಪಾದ ಮನುಷ್ಯನೊಬ್ಬ ಬಂದು ಮಗು ನಾನು ಮಲ್ಲಯ್ಯ ನನಗೆ ಹಸಿವಾಗಿದೆ ಊಟ ಮಾಡಿ ತುಂಬ ದಿನಗಳೇ ಕಳೆದವು ಎನಾದರೂ ಕೊಡು ಎಂದು ಕೇಳುತ್ತಾನೆ.

ಸಿದ್ದರಾಮ ಆಯಿತು‌ ಮನೆಗೆ ಹೋಗಿ ತರುತ್ತೆನೆ ಅಲ್ಲಿಯವರೆಗೂ ಇಲ್ಲೆ ಇರು ಎನ್ನತ್ತಾನೆ. ಮನೆಯಿಂದ ಮರಳುವಷ್ಟರಲ್ಲಿ ಆ ಅಜ್ಜ ಅಲ್ಲಿ ಇರುವುದಿಲ್ಲ … ಸಿದ್ದರಾಮ ತಾನು ಅಜ್ಜನಿಗಾಗಿ ತಂದಿದ್ದ ಅಂಬಲಿಯೊಂದಿಗೆ ಹುಡುಕುತ್ತಾ ತನ್ನ ಪಯನ ಬೆಳೆಸುತ್ತಾನೆ ಕೊನೆಗೆ ಆತ ತಲುಪಿದ್ದು ಶ್ರೀಶೈಲದಲ್ಲಿ!!

ಶ್ರೀಶೈಲದಲ್ಲಿ ನನ್ನ ಮಲ್ಲಯ್ಯ ಎಲ್ಲಿ ಎಂದು ಕೇಳಿದಾಗ ಸಹಜವಾಗಿ ಅಲ್ಲಿನ ಯಾತ್ರಿಕರು ಮಲ್ಲಿಜಾರ್ಜುನ‌ ಜ್ಯೋತಿರ್ಲಿಂಗ ತೋರಿಸುತ್ತಾರೆ. ಸಿದ್ದಾರಮ ಇವನು ನನ್ನ ಮಲ್ಲಯ್ಯ ಅಲ್ಲ ಎಂದು ಮತ್ತೆ ಪಯಣ ಬೆಳೆಸುತ್ತಾನೆ. ಮಲ್ಲಯ್ಯ ಸಿಗದಿದ್ದಾಗ ಮನನೊಂದು  ಕಮರಿಗೆ ಮಲ್ಲಯ್ಯ ಎಂದು ಕೂಗಿ ಜಿಗಿಯುತ್ತಿದ್ದ ವೇಳೆ ಭಕ್ತರ ಬಂದು ಮಲ್ಲಿಕಾರ್ಜುನ ಪ್ರತ್ಯಕ್ಷನಾಗಿ ಕಾಪಾಡುತ್ತಾನೆ‌.

ಮಲ್ಲಯ್ಯ ಅಭಯ ಹಸ್ತನೀಡಿ ನೀನಿರಬೇಕಾದದ್ದಿ ಈ ಶ್ರೀಶೈಲದಲ್ಲಿ ಅಲ್ಲ ಹೋಗು ಆ ಸೊನ್ನಲಿಗೆಯನ್ನೇ ಶ್ರೀಶೈಲ ಮಾಡು ಎಂದೂ ಆಶಿರ್ವದಿಸಿ ಕಳೆಸುತ್ತಾರೆ.

ಲೋಕ ಕಲ್ಯಾಣಕ್ಕೆ ಸಿದ್ದನಾದ ಸಿದ್ದರಾಮ:-
ಭಕ್ತರ ಸೇವೆಗೈಯುತ್ತ ಕಾಲ ಕಳೆದ ಸಿದ್ದರಾಮ ಸಕಲ ಜೀವಾತ್ಮರಿಗೆ ಬಂಧುವಾಗಿ ಅನುಭವ ಮಂಟಪದಲ್ಲಿ ಕಪಿಲ‌ಸಿದ್ದಾರಾಮ ಅಂಕಿತನಾಮದಿಂದ ವಚನಗಳನ್ನು ರಚಿಸುತ್ತಾರೆ. ಕರ್ಮ ಕಾಯಕ ಭಕ್ತಿಯ ಸಂಗಮಗಳ ವಿಚಾದ ಮಹಾಮಳೆಯನ್ನೆ ಸುರಿಸುತ್ತಾರೆ.

ಕಲ್ಯಾಣ ಕ್ರಾಂತಿಯ ಕಾಲದಲ್ಲಿ ಶಿವಯೋಗಿ ಸಿದ್ದರಾಮರು ಸೊಲ್ಹಾಪುರಕ್ಕೆ ಬಂದು ನೆಲೆಸುತ್ತಾರೆ. ದೇಣಿಗೆಯಾಗಿ ಬಂದ ಹಣದಲ್ಲಿ 68 ಶಿವಲಿಂಗಗಳನ್ನು ಸ್ಥಾಪಿಸುತ್ತಾರೆ. 17ಕ್ಕು ಹೆಚ್ಚು ದೇವಾಲಯ ಸ್ಥಾಪಿಸಿ ಪ್ರತಿನಿತ್ಯ ದಾಸೋಹ ಮಾಡುತ್ತಾರೆ.  ಅಂದಿನ‌ಕಾಲದಲ್ಲಿ ನೀರಿನ ಸಮಸ್ಯೆ ನೀಗಿಸಲು ಕರೆಗಳನ್ನು ನಿರ್ಮಿಸಿ ಅಲ್ಲೋದ ದೇವಾಲಯ ನಿರ್ಮಿಸಿ ಅದ್ಬುತ ಲೋಕವನ್ನೆ ಸೃಷ್ಟಿಸುತ್ತಾರೆ. ಧರೆಯಲ್ಲಿ ಕೈಲಾಸವನ್ನೆ ಸ್ಥಾಪಿಸುತ್ತಾರೆ. ರಾಘವಾಂಕರ ಸಿದ್ದಾರಾಮ ಪುರಾಣದ‌ ಉಲ್ಲೇಖದ ಪ್ರಕಾರ ಈ ಕೆರೆಗೆ ನೀರು ಬಿಡಲು ಈಶ್ವರ ಗಂಗೆಗೆ ಆದೇಶಿಸಿದನು ಎನ್ನಲಾಗಿದೆ.

ಸಿದ್ದೇಶ್ವರರು ಮಹಾರಾಷ್ಟ್ರ ಕರ್ನಾಟಕದಲ್ಲಿ ಕೋಟ್ಯಾಂತರ ಭಕ್ತಸಮೂಹ ಹೊಂದಿದ್ದಾರೆ. ಭಕ್ತರ ಬೇಡಿಕೆ ಈಡೇರಿಸುತ್ತ ಮಹಾರಾಷ್ಟ್ರದ ಸೋಲ್ಹಾಪುರದಲ್ಲಿ ಮತ್ತು ಕರ್ನಾಟಕದ‌ ವಿಜಯಪುರದಲ್ಲಿ ನೆಲೆನಿಂತಿದ್ದಾರೆ.

  
ಶತಮಾನ ಕಂಡ ವಿಜಯಪುರ‌ ಸಿದ್ದಾರಾಮನ ಜಾತ್ರೆ:- ಈ ಬಾರಿ ವಿಜಯಪುರದಲ್ಲಿ ಜಾತ್ರೆ ಮಹೋತ್ಸವ ವೈಶಿಷ್ಟ್ಯ ದಿಂದ ಕೂಡಿದೆ ಇದಕ್ಕೆ ಕಾರಣ ಶತಮಾನ ಸಂತಸ

ಅಂದು ವ್ಯಾಪಾರಸ್ಥರು ಸೊಲ್ಹಾಪುರ ಸಿದ್ದರಾಮನನ್ನು ವಿಜಯಪುರದಲ್ಲಿ ಪ್ರತಿಷ್ಠಾಪಿಸಿ 100ವರ್ಷ ಕಳೆದಿದೆ. ಅದೇ ಸಂಪ್ರದಾಯ ಆಚರಣೆಯಲ್ಲಿನ ಗಟ್ಟಿತನ, ನಂದಿಕೋಲಿನ ವೈಭವ, ಜಾನುವಾರು ಜಾತ್ರೆಯಲ್ಲಿನ ರೈತರ ಸಡಗರ, ಸಾಂಸ್ಕೃತಿಕ ಉತ್ಸವದ ಕಲಾವಿದರ ಸಂಭ್ರಮ ಮುಂದುವರೆದಿದೆ. ಒಂದು ಪಿಳಿಗೆಯಿಂದ ಮತ್ತೊಂದು ಪೀಳಿಗೆಗೆ ಈ ಆಚರಣೆ ಹೆಚ್ಚು ವೈಭವ ಪಡೆಯುತ್ತಿದೆ‌.

ಈ ಬಾರಿ ಶತಮಾನ ಸಂಭ್ರಮ ಅದ್ದೂರಿಯಾಗಿ ಆಯೋಜಿಸಿದ್ದು  ಜನವರಿ 11 ರಿಂದ 17 ರವರೆಗೆ ಜಾತ್ರೆ ನಡೆಯಲಿದೆ.

ಕೃಪೆ:vijayapurshetti.blogspot.in

Comments