ಗ್ರಹಚಾರ ಕೆಟ್ಟಾಗ ಶನಿ ಬಂದ ಎನ್ನುವರು
ಗ್ರಹಚಾರ ಕೆಟ್ಟಾಗ
ಶನಿ ಬಂದ ಎನ್ನುವರು .
ಬರುವಾಗ ಕಷ್ಟ ನಿಷ್ಟುರಗಳ ಕೊಡುವನೆಂದು ನಿಂದಿಸುವರು!!
ಶನಿಯಂತೆ ಜನ ಬರುವರು ಬಾಳಲ್ಲಿ
ನಿನ್ನ ಸಿಲುಕಿಸಿ ,ನರಳಿಸಿ ….
ಶಮಂತಕ ಮಾಲೆಯ ಹಂಸವು ತಿಂದು ವಿಕ್ರಮನ ಕೊರಳಿಗೆ ಕಳ್ಳನಪಟ್ಟವ ಕಟ್ಟಿ
ತುತ್ತು ಅನ್ನಕ್ಕಾಗಿ ಅಲೆದು….
ವನವಾಸವನ್ನು ಅನುಭವಿಸಿ …
ನಿನ್ನವರಿಂದ ದೂರಾಗಿ….
ಗಳಿಸಿದೆಲ್ಲವು ಅನ್ಯರಪಾಲಾಗಿ …..
ಕಣ್ಣೀರ ತರಿಸಿದರು …..
ಕೊನೆಯಲ್ಲಿ ನಿನಗೆ ದೊರೆಯುವುದೆಲ್ಲ ನಿನ್ನ ಕರ್ಮದ ಫಲವೇ ಹೊರತು ಬೇರೇನೂ ಅಲ್ಲಾ ….
ಜೀವನದಲ್ಲಿ ಕಷ್ಟ ನಿಷ್ಟೂರವಿಲ್ಲದ ಬಾಳಿಲ್ಲ!!
ಧರ್ಮವ ಕಾಪಾಡುವವನ ಕೈ
ಬಿಡದೆ ಕಾಪಾಡುವ ದೊರೆಯು ….!!
ಪಾಠವ ಕಲಿಸಲು ಕೊಡುವ ಜೀವನದ ಹೊರೆಯ …. !!
ತಾಳಿದವರೇ ಬಾಳುವರು !!
ಶನಿಯಂತೆ ಬಂದರೆಂದು ಕೊರಗ ಬೇಡ ನೀ !!
ಶನಿ ನಿನ್ನ ಬಿಟ್ಟೋಗುವಾಗ ಹೊಳೆಯುವ ಚಿನ್ನದಂತಾಗುವೆ ನೀ!!
.
.
❤ಪ್ರೀತಿ ಇಂದ ಪ್ರೀತಿಯ ❤
❤ಹಂಚ ಬೇಕು ಮಾನವ ❤
ನಿಮ್ಮ ಅನಿಸಿಕೆಯನ್ನು 👇🏻
ಈ ವಾಟ್ಸ್ ಆಪ್ number ಗೆ ಕಳಿಸಿ
೯೯೪೫೬೪೫೯೮೫ (9945645985)
🙏🏻ಧನ್ಯವಾದಗಳೊಂದಿಗೆ 🙏🏻
😍 ವಾಣಿ ಶೆಟ್ಟಿ 😍