UK Suddi
The news is by your side.

ಪದವಿಗಳ ಮಾರುಕಟ್ಟೆಯಾದ ಶಿಕ್ಷಣ ಸಂಸ್ಥೆಗಳು.

ಪ್ರತಿ ವರ್ಷ ಮೇ ಮತ್ತು ಜೂನ್ ಬಂತೆಂದರೆ ಶಿಕ್ಷಣ ಪಡೆಯುವ ಮಕ್ಕಳ ಪಾಲಕರಿಗೆ ತಮ್ಮ ಮಕ್ಕಳ ಶಿಕ್ಷಣ ಭವಿಷ್ಯದ  ಆತಂಕ ಕಳವಳ ನೋವು ಚಿಂತೆ ಇದ್ದೆ ಇರುತ್ತದೆ. ಸರಕಾರಿ ಅನುದಾನ ಪಡೆದ ಅನೇಕ ಕಾಲೇಜು ಹೈ ಸ್ಕೂಲ್ ಗಳು ಮಕ್ಕಳಿಂದ ಪಾಲಕರಿಂದ ಹೆಚ್ಚಿನ ಡೊನೇಷನ್ ಪಡೆದುಕೊಳ್ಳುತ್ತಾರೆ.
ಎಲ್ ಕೆ ಜಿ ಗೆ ಇಪ್ಪತೈದು ಸಾವಿರ ಹಣ ಡೊನೇಷನ್ ಅಂತೇ.ಮಾಧ್ಯಮಿಕ ಶಾಲೆಗೆ 50000 /- ಡೋನೇಷನ ರೂಪದ ಲಂಚವನ್ನು ಸುಲಿಗೆ ಮಾಡುವ ಸಂಸ್ಥೆಗಳು.  ಕಾಲೇಜಿಗೆ ಅದರಲ್ಲೂ ಪಿ ಯು ಸಿ ವಿಜ್ಞಾನ ತರಬೇತಿಗೆ ಲಕ್ಷಗಟ್ಟಲೆ ಹಣವನ್ನು ಪಾಲಕರು ಕಟ್ಟಲೆ ಬೇಕು . ಮಕ್ಕಳು ಡಾಕ್ಟರ್ ಇಂಜಿನೀರ್ ಆಗುತ್ತಾರೆ ಎಂಬ ಕನಸು ಕಟ್ಟಿಕೊಂಡ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಹೆಚ್ಚಿನ ಶಿಕ್ಷಣ ಮರೀಚಿಕೆಯಾಗಿದೆ.

ಕರ್ನಾಟಕ ಸರಕಾರ RTE ಕಾಯ್ದೆಯಡಿ ಶಿಕ್ಷಣ ಕೊಡಬೇಕೆನ್ನುವ ಕಾನೂನು ಇದ್ದರು ಶಿಕ್ಷಣ ಸಂಸ್ಥೆ ಎಂಬ ಹಗಲು ದರೋಡೆ ಮಾಡುವ ಮಾಫಿಯಾಗಳು ಅವುಗಳೆಲ್ಲವನ್ನೂ ಗಾಳಿಗೆ ತೂರಿ ಹಣ ಮಾಡಬೇಕೆನ್ನುವ ಒಂದೇ ಸೂತ್ರದಡಿ ಶಿಕ್ಷಣ ಸಂಸ್ಥೆಗಳು  ಸರಕಾರಕ್ಕೂ ಸವಾಲೊಡ್ಡುವ ಬಿಳಿ ಆನೆಗಳಾಗಿವೆ.

ಸರಕಾರೀ ಕಾಲೇಜಿನಲ್ಲಿ ಹೆಚ್ಚಿನ ಸೌಲಭ್ಯವಿರುವದಿಲ್ಲ . ಖಾಸಗಿ ಶಾಲೆಗಳಿಗೆ ಹಣ ಮಾಡಲು ಸ್ವತಃ ಸರಕಾರವೇ ಶಿಕ್ಷಣ ಸಂಸ್ಥೆಗಳ ಬೆಂಗಾವಲಿಗೆ ನಿಂತಿವೆ.

ಪಿ ಯು ಸಿ ಆದ ಮೇಲೆ ಇನ್ನೊಂದು ರೀತಿಯ ಸುಲಿಗೆ . ಖಾಸಗಿ ಮೆಡಿಕಲ್ ಇಂಜಿನೀರಿಂಗ್ ಫಾರ್ಮಾಸಿ ಪಾಲಿಟೆಕ್ನಿಕ್ ,ಹೋಮಿಯೋಪಥಿಕ್ ಆಯುರ್ವೇದಿಕ್ ನರ್ಸಿಂಗ್ ಮುಂತಾದ ವೃತ್ತಿ ಪರ ಕೋರ್ಸ್ ಗಳಿಗೆ ಲಕ್ಷಗಟ್ಟಲೆ ಹಣ ಡೊನೇಷನ್ ಮತ್ತು ಫಿ ರೂಪದಲ್ಲಿ ಕೊಡಬೇಕು. 

ಗ್ರಾನೈಟ್ ಮಾಫಿಯಾ , ಗಣಿ ಮಾಫಿಯಾ ಅಬಕಾರಿ ಮಾಫಿಯಾದಂತೆ ಶಿಕ್ಷಣ ಸಂಸ್ಥೆಗಳ ಮಾಫಿಯಾ ಸರಕಾರವನ್ನೇ ನಿಯಂತ್ರದನದಲ್ಲಿಟ್ಟಿದೆ.

ಹಣ ಕೊಟ್ಟರೆ ಪದವಿ ನೀಡುವ ವಿಶ್ವ ವಿದ್ಯಾಲಯಗಳು , ಪಿ ಎಚ್ ಡಿ ಮಾರ್ಗದರ್ಶಕನಾಗ ಬೇಕಾದರೆ ವಿಶ್ವ ವಿದ್ಯಾಲಗಳಿಗೆ ಹಣ ಕಟ್ಟಬೇಕು. ಎಂತ ಕರ್ಮ ನೋಡಿ . ಯು ಜಿ ಸಿ ಅನುದಾನ ಸಂಸ್ಥೆ  (UNIVERSITY GRANT COMMISSION  ) ಶಿಕ್ಷಣ ಸಂಸ್ಥೆಗಳ ಅವ್ಯವಹಾರವನ್ನು ನೋಡಿ ಕಣ್ಣು ಮುಚ್ಚಿ ಕುಳಿತಿವೆ. ಶಿರಸಂಗಿ ಲಿಂಗರಾಜರು ಅರಟಾಳ ರುದ್ರಗೌಡರು ,ಶ್ರೀನಿವಾಸ ರೊದ್ದ ,ಶಿ ಶಿ ಬಸವನಾಳರು ಸಮಾಜದ  ಬಡ ಮಕ್ಕಳಿಗೆ ಶಿಕ್ಷಣ ಸಿಗಬೇಕೆನ್ನುವ  ಅವರ ಕನಸು ನುಚ್ಚು ನೂರಾಗಿದೆ.ಎಂದು ಕೊನೆಗೊಳ್ಳುವುದು ಶಿಕ್ಷಣ ಸಂಸ್ಥೆಗಳ ಹಗಲು ದರೋಡೆ .

———————————-

ಡಾ.ಶಶಿಕಾಂತ ಪಟ್ಟಣ ರಾಮದುರ್ಗ.

Comments