ಬೇಕು ಅವರಿಗೆ.
ಬೇಕು ಅವರಿಗೆ ಮಠಗಳು
ಇವರಿಗೆ ಮತಗಳು
ಭವ್ಯ ಮಂಟಪ ವೇದಿಕೆ
ಅಲ್ಲಿ ಆಸನ ಭಾಷಣ
ದೊಡ್ಡವರ ಆಕಳಿಕೆ ತೂಕಡಿಕೆ
ಲಾಂಛನಗಳ ಮೆರವಣಿಗೆ
ಖಾದಿಗಳ ಕಿರುಚಾಟ
ಕಾವಿಗಳ ಆಶೀರ್ವಚನ
ಗಂಟೆಗಟ್ಟಲೆ ಕೊರೆತ
ಹಿಂದೆ ಕುಳಿತವರ ಗೊರಕೆ
ಹೊಗಳಿಕೆ ಘೋಷಣೆ
ಕೂಗು ಚಪ್ಪಾಳೆ
ಟೀಕೆ ವಾದ ವಿವಾದ
ಟಿ ವಿ ಮಾಧ್ಯಮಗಳ ಹಬ್ಬ
ಅವರಿಗೂ ಬೇಕು ಸುದ್ಧಿ
ಸಂಜೆ ಬ್ರೇಕಿಂಗ್ ನ್ಯೂಸ್
ವಾರವಿಡೀ ಚರ್ಚೆ
ಶತಮಾನವು ಕಳೆದಿವೆ
ಎದ್ದಿಲ್ಲ ಬಿಟ್ಟು ನಿದ್ದಿ
ನೊಂದಿಹನು ಬಸವಣ್ಣ
ಇಲ್ಲ ಭಕ್ತರಿಗೆ ಬುದ್ಧಿ
ಅವರಿಗೆ ಬೇಕು ಮಠಗಳು
ಇವರಿಗೆ ಮತಗಳು
———————–
ಡಾ.ಶಶಿಕಾಂತ.ಪಟ್ಟಣ ಪುಣೆ
(ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮದ ಮಾನ್ಯತೆಯ ಚಿತ್ರಣ ನೋವು ಉದಾಸೀನತೆ ಹತಾಶೆಯಿಂದಾ ನಿಮ್ಮೆಲ್ಲರ ಭಾವನೆಗಳ ಪ್ರತೀಕವಾಗಿ ಬರೆದಿರುವ ನೋವಿನ ಕವನ )