ಬೈಲಹೊಂಗಲ:ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ.
ಬೈಲಹೊಂಗಲ:ಸ್ವಾಮಿ ವಿವೇಕಾನಂದರ 155ನೇಯ ಜಯಂತಿಯ ಹಾಗೂ ನೇತಾಜಿ ಸುಭಾಷಚಂದ್ರ ಬೋಸರ 121ನೇಯ ಜಯಂತಿಯ,ಅಟಲ್ ಬಿಹಾರಿ ವಾಜಪೇಯಿ 93ನೇ ಜನ್ಮ ದಿನದ ಅಂಗವಾಗಿ ತಾಲೂಕಿನ ಆನಿಗೋಳ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ಡಾ.ವಿಶ್ವನಾಥ ಪಾಟೀಲ ಅಭಿಮಾನಿ ಬಳಗ ಮತ್ತು ಕೆ ಎಲ್ ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಜೆ ಎನ್ ವೈದ್ಯಕೀಯ ಮಹಾವಿದ್ಯಾಲಯ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಜರುಗಿತು.
ಕಾರ್ಯಕ್ರಮವನ್ನು ಶಾಸಕರಾದ ಡಾ.ವಿಶ್ವನಾಥ ಪಾಟೀಲ ಉದ್ಘಾಟಿಸಿ ಮಾತನಾಡಿದ ಅವರು “ಸ್ವಾಮಿ ವಿವೇಕಾನಂದರ ಹಾಗೂ ನೇತಾಜಿ ಸುಭಾಷಚಂದ್ರ ಬೋಸರ ತತ್ವಾದರ್ಶಗಳನ್ನು ಯುವಕರು ಅಳವಡಿಸಿಕೊಳ್ಳಬೇಕು ಮತ್ತು ಯುವ ಜನತೆ ದುಷ್ಟಚಟಗಳಿಂದ ದೂರವಾಗಲು ಕರೆ ನೀಡಿದರು. ನಿಸರ್ಗದತ್ತ ಈ ಭೂಮಿಯಲ್ಲಿ ಮನುಷ್ಯನಿಗೆ ಏಲ್ಲಾ ಸಿರಿ ಸಂಪತ್ತುಗಳು ಸಿಗುತ್ತವೆ ಆದರೆ ರಕ್ತವೆಂಬ ಶ್ರೆಷ್ಠ ವಸ್ತು ಅದು ಮನುಷ್ಯನ ದೇಹದಿಂದ ಮತ್ತೂಬ್ಬ ಮನುಷ್ಯನಗೆ ಮಾತ್ರ ಸಿಗುತ್ತದೆ, ಆದರಿಂದ ನೀವು ಕೊಡವ ರಕ್ತವು ಯಾವ ಜಾತಿಯ ರಕ್ತವೆಂದು ಪರಿಗಣಿಸಾಲಾಗುವುದಿಲ್ಲ ಆದರಿಂದ ರಕ್ತದಾನ ಶ್ರೆಷ್ಠ ದಾನವಾಗಿದೆ”ಎಂದು ಹೇಳಿದರು.
ಈ ಶಿಭಿರದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗು ರಂಗೋಲಿ ಸ್ಪರ್ದೆ ಕೂಡಾ ಏರ್ಪಡಿಸಲಾಗಿತ್ತು.
ಈ ಶಿಬಿರದಲ್ಲಿ ಬೆಳಗ್ಗೆಯಿಂದ ಆನಿಗೋಳ ಗ್ರಾಮ ಸೇರಿದಂತೆ ಸುತ್ತಮುತ್ತಲಿ ಗ್ರಾಮಗಳ ಯುವಕರು, ಮಹಿಳೆಯರು ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರದಲ್ಲಿ ಪಾಲ್ಗೋಂಡರು.
ಈ ಸಂದರ್ಭದಲ್ಲಿ ಕೆ ಎಲ್ ಇ ಸಂಸ್ಥೆಯ,ಜೆ ಎನ್ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಾಧಿಕಾರಿಗಳು,ಸಿಬ್ಬಂದಿ ವರ್ಗ,ಬಿಜೆಪಿ ಮುಖಂಡರು, ಕಾರ್ಯಕರ್ತರು,ಗ್ರಾಮಸ್ಥರು ಉಪಸ್ಥಿತರಿದ್ದರು.
-ಗುರು ಎಸ್ ಎ.