UK Suddi
The news is by your side.

ಎರಡಕ್ಷರ ನೀನು


ಎರಡಕ್ಷರದ ನೀನು ನಾನು 
ಸ್ನೇಹ ಪ್ರೀತಿ ಆನು ತಾನು

ಒಲುಮೆ ಅರಳಿತು 

ಸೃಷ್ಟಿ ಸೊಬಗು 

ಹೂವು ಎಲೆ 

ಕಾಂಡ ಬೇರು 

ಮಣ್ಣು ನೀರು 

ಗಾಳಿ ಬೆಳಕು 

ಗಟ್ಟಿಗೊಂಡಿತು  ಬಾಳು.

ಹುಟ್ಟು ಸಾವು 

ನಲುಮೆ ನೋವು 

ಚಂದ್ರನಿರುಳು 

ಹರಿದು ಹೋಯಿತು

ಹಗಲು ಹರಡಿದೆ 

ಸೂರ್ಯ ಭಾನು 

ನಿನ್ನ ಕಣ್ಣಲಿ ಕಾಂತೆ

ಹೊಳಪು

ಮುಗುಳು ಮಲ್ಲಿಗೆ 

ನಗೆಯ ಬಿಳುಪು 

ಸಾಗಿ ಬಂದೆವು

ನೆರಳು ಬಿಸಿಲು

ನಿಲ್ಲಲಾರದ  ಬಂಡಿಯು 

ಎರಡಕ್ಷರದ ನೀನು ನಾನು

ಸ್ನೇಹ ಪ್ರೀತಿ ಆನು ತಾನು

——————————-

ಡಾ.ಶಶಿಕಾಂತ.ಪಟ್ಟಣ -ರಾಮದುರ್ಗ

Comments