KSRTCಯಿಂದ ದೇಶದ ಮೊದಲ ಬಸ್ ಆಂಬ್ಯುಲೆನ್ಸ್ ಸೇವೆ
ಬೆಂಗಳೂರು: ಕೆಎಸ್ಆರ್ಟಿಸಿಯು ದೇಶದ ಮೊದಲ ಬಸ್ ಆಂಬ್ಯುಲೆನ್ಸ್ನ್ನು ಸಾರ್ವಜನಿಕ ಸೇವೆಗೆ ಅಧಿಕೃತವಾಗಿ ಪರಿಚಯಿಸಿದೆ. ಈಗಾಗಲೇ ಪ್ರಾಯೋಗಿಕವಾಗಿ ಬಸ್ ಅಂಬ್ಯುಲೆನ್ಸ್ ಅನ್ನು ಬಳಸಿದ್ದ ಕೆಎಸ್ಆರ್ಟಿಸಿ ಶುಕ್ರವಾರ ಅಧಿಕೃತವಾಗಿ ಬಸ್ ಆಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದೆ.
ಕೆಎಸ್ಆರ್ಟಿಸಿ ಬಸ್ ಅಪಘಾತವಾದ ವೇಳೆ ಗಾಯಾಳುಗಳಿಗೆ ಸಕಾಲಕ್ಕೆ ಪ್ರಥಮ ಚಿಕಿತ್ಸೆ ಹಾಗೂ ಅಗತ್ಯ ಪ್ರಮಾಣದ ಆಂಬ್ಯುಲೆನ್ಸ್ ಲಭ್ಯವಾಗದೇ ಸಾವಿನ ಪ್ರಮಾಣ ಹೆಚ್ಚುತ್ತಿರುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಬಸ್ ಆಂಬ್ಯುಲೆನ್ಸ್ ಸೇವೆ ಜಾರಿಗೆ ತಂದಿದೆ. ಈ ಬಸ್ ಆಂಬ್ಯುಲೆನ್ಸ್ ಇಪ್ಪತ್ತಕ್ಕೂ ಹೆಚ್ಚು ಗಾಯಾಳುಗಳಿಗೆ ಏಕಕಾಲಕ್ಕೆ ತುರ್ತು ಚಿಕಿತ್ಸೆ ನೀಡಬಲ್ಲದಾಗಿದೆ.
ಮೊದಲ ಹಂತದಲ್ಲಿ ಕೆಎಸ್ಆರ್ಟಿಸಿ ಎಲ್ಲ ವಿಭಾಗದಲ್ಲಿ ಒಂದೊಂದು ಬಸ್ ಆಂಬ್ಯುಲೆನ್ಸ್ ಒದಗಿಸಲಾಗುವುದು.ನಂತರ ಎಲ್ಲ ಸಾರಿಗೆ ನಿಗಮಕ್ಕೆ ಯೋಜನೆ ವಿಸ್ತರಣೆ ಮಾಡಲಾಗುವುದು. ಅದಕ್ಕಾಗಿ ಗೋಲ್ಡನ್ ಅವರ್ ಸಂಸ್ಥೆ ಜತೆ ಕೆಎಸ್ಆರ್ಟಿಸಿ ಒಡಂಬಡಿಕೆ ಮಾಡಿಕೊಂಡಿದೆ.