UK Suddi
The news is by your side.

ವಚನ ಚಿಂತಕರಿಗೊಂದು ವಿನಂತಿ 


ಬಸವಾದಿ ಶರಣರ ವಚನಗಳಾಧಾರಿತ ಚಿಂತನೆಗಳು ಇಂದು ವಿಶ್ವ ವ್ಯಾಪಿಯಾಗಿ ವ್ಯಾಪಕ ಪ್ರಚಲಿತಗೊಳ್ಳುತ್ತಿರುವ ಸಂದರ್ಭದಲ್ಲಿ  ಅವುಗಳ ಪ್ರಸಾರ ಮಾಡುವ ಹಿನ್ನೆಲೆಯಲ್ಲಿ ನಾವುಗಳೆಲ್ಲ ಗಂಭೀರವಾಗಿ ಚಿಂತಿಸಬೇಕಿದೆ .

1 ) ವಚನಗಳನ್ನು ವೈಚಾರಿಕ ವೈಜ್ಞಾನಿಕವಾಗಿ ಅರ್ಥೈಸುವ ಹಾಗು ಸಾರ್ವತ್ರಿಕಗೊಳಿಸುವ ವಚನ ವಿಶ್ಲೇಷಕರ ಚಿಂತಕರ ಚಾವಡಿ ರಚಿಸುವುದು ಮುಖ್ಯ

ಗ್ರೂಪ ನಲ್ಲಿ ಕೇವಲ ಕೈಮುಗಿದು ವಾವ ವಾವ ಎಂದು ಹೇಳಿ ಜಾರಿಕೊಳ್ಳುವ ಕಾರ್ಯ ಮಾಡಬಾರದು 

2 ) ವಚನಗಳನ್ನು ಇಂಗ್ಲಿಷ್ ಹಿಂದಿ ಮರಾಠಿ ತೆಲಗು ಹಾಗು ಇತರ  ಭಾಷೆಗೆ ತರ್ಜುಮೆಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.

3 ) ಶರಣರು ಕಂಡು ಕೊಂಡ ಉದಾತ್ತೀಕರಣದ ಕಲ್ಪನೆ ಇಂದಿಗೂ ಮುಂದೆಯೂ ಆದರ್ಶವಾಗಿದೆ.

4 ) ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ ಎಂದೆನ್ನುವ ರೀತಿಯಲ್ಲಿ ಲಿಂಗ ತತ್ವವನ್ನು ತಿಳಿಯಬೇಕು.

5 ) ಜಂಗಮ ಜಂಗುಳಿಯಲ್ಲ ಅದು ಸಮಾಜ ಅದು ಚೈತನ್ಯ ಅದರ ಫಲವೇ ಲಿಂಗವೆಂಬ ಗೊಂಚಲು.

6 ) ಡಿಬಕ್ಕೆ ಕನಿಷ್ಠ ಎರಡು ಘಂಟೆ ವಚನ ಅಧ್ಯನ ನಡೆಸಬೇಕು ಹಾಗು ಹೊಸ ಹೊಸ ಹೊಳವುಗಳನ್ನು ಅರ್ಥೈಸಿ ಗ್ರೂಪ್ ನಲ್ಲಿ ಚಿಂತಿಸಬೇಕು.

7 ) ನಮ್ಮ ಚಿಂತನೆಗಳನ್ನು ಪ್ರಿಂಟ್ ಮಾಡಿ ಮುದ್ರಿಸಿ ಕ್ರೈಸ್ಟ್ ಮಾದರಿಯಲ್ಲಿ   ಮನೆ ಮನೆಗೆ ಹಂಚಬೇಕು.

8 ) ವಚನ ಚಿಂತನೆಯಲ್ಲಿ ಶುದ್ಧತೆ ಇರಲಿ ವ್ಯಾಕರಣ ಭಾಷೆ ನೈಜತೆ  ಪ್ರಭುತ್ವ ಆಳವಾದ  ಚಿಂತನೆ ಮತ್ತು ಅಭಿವ್ಯಕ್ತಿ  ಮುಖ್ಯ 

10 ) ವಚನ ಚಿಂತನಗಳನ್ನು ಪ್ರಸಾರ ಮಾಡಲು ಅನೇಕ ಪ್ರಕಾಶಕರು ಮುಂದೆ ಬಂದಿದ್ದಾರೆ ಆದರೆ ಅವರು ಕೇವಲ ನೂರು ಪ್ರತಿಗಳನ್ನು ಲೇಖಕರಿಗೆ ಕೊಟ್ಟು ತಾವು ಉಳಿದ ಪುಸ್ತಕಗಳನ್ನು ಮಾರಾಟ ಮಾಡುತ್ತಾರೆ .ಕಾರಣ ನಮ್ಮ ಗ್ರೂಪ್ ನ ಸದಸ್ಯರು ಚಿಂತಕರು ನಾವೇ ಪ್ರಕಟಗೊಳಿಸಿ ನಮ್ಮ ಚಿಂತನಗಳು ನಮ್ಮವರಲ್ಲಿಯೇ ಪಸರಿಸಿ ಆಪ್ತವಾಗಲೇ ಎಂದು ನನ್ನ ಬಯಕೆ.

11) ಕಾರಣ ಎಲ್ಲರೂ ತನು ಮನ ಧನ ಭಾವ ಶುದ್ಧಿಯಿಂದ ಕಾರ್ಯ ಕೈಕೊಂಡರೆ ಇದು ಅತ್ಯಂತ ಸರಳವಾದ ಕೆಲಸ.

ವಚನಗಳನ್ನು ಮುದ್ರಿಸಿ ಪ್ರಕಟಿಸಿ ಹಂಚೋಣ ಏನಂತೀರಿ

ಹೀಗೆ ಮಾಡಿದಲ್ಲಿ ನಿಜವಾದ ಲಿಂಗ ತತ್ವ ಜನರಿಗೆ ಅರ್ಥವಾಗುತ್ತದೆ ಆಗ ಜನರು ಸಾಂಸ್ಥಿಕರಣದಿಂದ ಧರ್ಮವನ್ನು ಭಿನ್ನವಾಗಿ ನೋಡುತ್ತಾರೆ ಹಾಗು ಆಚರಿಸುತ್ತಾರೆ.

ಜನರಿಗೆ ಲಿಂಗಾಯತ ಒಂದು ಸ್ವತಂತ್ರ ಧಾರ್ಮ ಹಿಂದುಯೇತರ ಅವೈದಿಕ ಆಚರಣೆ ಎಂದು ಮನವರಿಕೆ ಮಾಡಿಕೊಡಲು ಇಂತಹ ಪ್ರಯತ್ನಗಳು ಸಮಂಜಸವಾಗಿರುತ್ತವೆ. ಒಂದು ಕಡೆಗೆ ಮನಸಿಗೆ ಬಂದಂತೆ ವಚನಗಳ ತಿದ್ದುಪಡಿ ವಚನಾಂಕಿತ ತಿದ್ದುಪಡಿ ವಚನಗಳ ವಿರೂಪಗೊಳಿಸುವ ನಮ್ಮ ಕೆಲ ಲಾಂಛನಧಾರಿಗಳು ಇದನ್ನು ಗುರು ಶಷ್ಯ ಪರಂಪರೆಗೆ ಒಯ್ಯುವ ಹುನ್ನಾರ ಮಾಡುತ್ತಿದ್ದಾರೆ. ಪ್ರಕ್ಷಿಪ್ತತೆ ಕಲಬೆರಕೆ ವಚನ ಸಾಹಿತ್ಯದಲ್ಲಿ ನಿರಂತರ ಸಾಗಿದೆ.

ಸತ್ಯ ಶುದ್ಧ ವಚನಗಳನ್ನು ಜನರಿಗೆ ಅರ್ಥ ಸಮೇತ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಕಾರಣ ಎಲ್ಲರೂ ಇದನ್ನು ಹೇಗೆ ಕಾರ್ಯ ರೂಪಕ್ಕೆ ತರಬೇಕೆಂದು ಯೋಚಿಸಿರಿ.

ವಾಟ್ಸ್ ಅಪ್ ಹಾಗು ಫೇಸ್ ಬುಕ್ ಜಲ ತಾಣಗಳಲ್ಲಿ ಈಗಾಗಲೇ ಸಾಕಷ್ಟು ಪ್ರಚಾರವಾಗಿದ್ದರು ಅದು ದಾಖಲೀಕರಣಗೊಂಡು ಜನರಿಗೆ ತಲುಪುತ್ತಿಲ್ಲ,

ಶರಣರ ಕ್ರಾಂತಿ  ಬಲಿದಾನಕ್ಕೆ ನ್ಯಾಯ  ಒದಗಿಸೋಣ ಬನ್ನಿ .ಶರಣರ ಆಶಯ ಬಸವಣ್ಣ ಸಂಕಲ್ಪಕ್ಕೆ 

———————————-

-ಡಾ,ಶಶಿಕಾಂತ.ಪಟ್ಟಣ ,ರಾಧಾ ,ರುದ್ರಮ್ಮ, ಪ್ರಕಾಶ ಪಾಟೀಲ,ಸುನಿತಾ ಮೂರಶಿಳ್ಳಿ,  ಲತಾ ವಾಲಿ, ರುದ್ರೇಶ ಕಿತ್ತೂರ, ರೋಹಿಣಿ ಯಾದವಾಡ, ಪ್ರೇಮಕ್ಕ ಅಂಗಡಿ.

Comments