UK Suddi
The news is by your side.

ಕಾಯಕ.

ಕಾಯಕ

ಕಾಯಕವೆಂದರೆ,ಕೆಲಸ,ಕೂಲಿ,ವ್ರತ್ತಿ, ದುಡಿಮೆ,ಉದ್ಯೋಗ, ಧಂದೆಯೆಂದು, ಸಾಮಾನ್ಯ ಅರ್ಥದಲ್ಲಿ, ನಾವು ಹೇಳುತ್ತೇವೆ,

ಇದು ಸಾಮಾನ್ಯರದ್ದಾದರೆ,!

ಶರಣರ ದ್ರಷ್ಟಿಯಲ್ಲಿ ವಿಭಿನ್ನವಾಗಿದೆ.ಇದು ಶರಣರಿಂದ ಶರಣರಿಗಾಗಿ ಉಗಮವಾದದ್ದೆಂದು ಹೇಳಿದರೆ ತಪ್ಪಾಗಲಾರದು,

ಶರಣರಿಂದ ವಿಶಿಷ್ಟ ತೆಯನ್ನು ಹೊಂದಿದ್ದಾಗಿ ಹೊರ ಹೊಮ್ಮಿದೆ

ಇದರಲ್ಲಿ ನಿಸ್ವಾರ್ಥ. ನಿಷ್ಕಪಟ.ಶುಚಿತ್ವಗಳ ಸುರುಳಿಗಳೊಳಗಿಂದ ಹೊರಬಂದ ಪ್ರಾಮಾಣಿಕತೆಯ 

ನಿರ್ಮಲವಾದ ಅರ್ಥಪೂರ್ಣವಾದ ಪದ ಇಲ್ಲ ಶಬ್ದ ವೆಂದು. ಹೇಳಿದರೆ ತಪ್ಪಲ್ಲ.

ಕಾಯಕದಲ್ಲಿ ಸತ್ಯ ಶುದ್ಧ .ನಿಷ್ಠೆ. ಶ್ರಮ.ನಿಯಮ.ನಿರಾಶೆ. ದಾರಿದ್ರ್ಯನಿವಾರಣೆ.ಎಚ್ಚರಿಕೆ. ಸಹಕಾರ. ನ್ಯಾಯ.ಸಮಯಪಾಬಂದಿ.

ಹೀಗೆ ಹಲ ಬಗೆಯ.ವರ್ಗಗಳ ನ್ನು.ಮಾಡಬಹುದು.

ಉದಾಹರಣೆ,… ಸತ್ಯ ಶುದ್ಧವಿಲ್ಲದುದು ಕಾಯಕವಲ್ಲ”ವೆಂದು.ಶರಣೆ ಕಾಳವ್ವೆ ಹೇಳುವಲ್ಲಿ ಸತ್ಯ. ಶುದ್ಧ ತೆಗೆ ಇದ್ದ ಮಹತ್ವ ತಿಳಿಸಿದರೆ.

ಶರಣೆ.ಗಂಗಮ್ಮ ಆವ ಕಾಯಕ ಮಾಡಿದಡೂ ಒಂದೇ ಎಂದು ಕಾಯಕದಲ್ಲಿಯ ಸಮಾನತೆಯನ್ನು ತಿಳಿಸುತ್ತಾಳೆ.

ಅದರಂತೆ ಶರಣೆ ಮುಕ್ತಾಯಕ್ಕ 

ಸುಮ್ಮನೇಕೆ ಹೊತ್ತುಗಳೆವಿರಿ ಎಂದು ಸಮಯ ಪ್ರಜ್ಞೆ ಇಟ್ಟುಕೊಳ್ಳುವದನ್ನು ಅರುಹಿದ್ದಾರೆ.ಸಾಮಾನ್ಯ ಜನರ ಲ್ಲೂ ಇಂಥ ಮಾತು ನಮಗೆ ಕೇಳಸಿಗುತ್ತದೆ.”ಹೊತ್ತು ಹೋದರೆ ಮತ್ತೆ ಬಾರದು.ಮತ್ತು  ಒಡೆದರೆ ಮತ್ತೆ ಕೂಡದು”ಎಂದು

ಅದರಂತೆ ಶರಣೆ ಆಯ್ದಕ್ಕಿ ಲಕ್ಕಮ್ಮ.ಕಾಯಕ ನಿಂದಿತ್ತು ಹೋಗಯ್ಯಾ ಎಂದು ಪತಿಯನ್ನು ಎಚ್ಚರಿಸುವ ಬಗೆ ವಿಷೇಷವೆನಿಸುವದಿಲ್ಲವೇ?

ಅದರಂತೆ ಕಾಯಕದಲ್ಲಿ ನಿರಾಶೆ ಯಿರಬೇಕು.ಪ್ರತಿಫಲಾಪೇಕ್ಷಿಗಳಾಗಿರಬಾರದೆನ್ನುವದಕ್ಕೂ ಆಯ್ದಕ್ಕಿ ಲಕ್ಕಮ್ಮ. ನುಲಿಯ ಚಂದ್ರಯ್ಯರಂತೆ ಇನ್ನೂ ಹಲವು ಶರಣರ.ಹಲವು ವಚನಗಳಲ್ಲಿ ಇಂಥ ಉದಾಹರಣೆಗಳಲ್ಲಿ ಕಂಡುಬರುತ್ತದೆ.

ಒಟ್ಟಾರೆ ಈ ಮೂರಕ್ಷರದ ಒಡಲೊಳು ಬಹಳ ವಿಶಾಲತೆಯಿದೆ.ಆಳವಿದೆ.ಅಗೆದಷ್ಟೂ ಬೊಗಸೆತುಂಬಿ ಬರುತ್ತದೆ. ಎಷ್ಟು ಹೇಳಹೊರಟರೂ ಕಡಿಮೆಯೆಂದೇ ಹೇಳಬೇಕು.

ಲೀಲಾ ಕಲಕೋಟಿ.

Comments