UK Suddi
The news is by your side.

ಕುಳಲಿಯಲ್ಲಿ ಗ್ರಾಮದಲ್ಲಿ 5ನೇ ತಾಲೂಕು ಸಾಹಿತ್ಯ ಸಮ್ಮೇಳನ.

ಮುಧೋಳ: ತಾಲೂಕಿನ ಕುಳಲಿಯಲ್ಲಿ 5ನೇ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಮಾಡಲು ನಿರ್ಧರಿಸಲಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಸಂಗಮೇಶ ನೀಲಗುಂದ ತಿಳಿಸಿದರು. ಕುಳಲಿ ಗ್ರಾಮಕ್ಕೆ ಕಸಾಪ ಪದಾಧಿಕಾರಿಗಳು ಹಾಗೂ ಸದಸ್ಯರು ಭೇಟಿ ನೀಡಿ ಸುದ್ದಿಗಾರರ ಜತೆ ಮಾತನಾಡಿದರು. ಕುಳಲಿ ಗ್ರಾಮದಲ್ಲಿ ಹಿರಿಯರು, ಗ್ರಾ.ಪಂ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರುಗಳು, ಸ್ವಾಮೀಜಿಗಳು, ಗ್ರಾಮಸ್ಥರು ಸಹಕಾರ ನೀಡುವುದಾಗಿ ಹೇಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹಾಗೂ ಶಾಸಕ ಗೋವಿಂದ ಕಾರಜೋಳ ಮಾರ್ಗದರ್ಶನದಲ್ಲಿ ಸಮ್ಮೇಳನ ಆಯೋಜಿಸಲಾಗುವುದು. ಶೀಘ್ರವೇ ದಿನಾಂಕ ಪ್ರಕಟಿಸಲಾಗುವುದು ಎಂದು ನೀಲಗುಂದ ತಿಳಿಸಿದ್ದಾರೆ.

Comments