UK Suddi
The news is by your side.

ಖಾನಾಪುರ: ರಸ್ತೆ ಅಪಘಾತ, ಪತ್ರಕರ್ತ ಸಾವು

ಸಂಸಾರ ಸಮೇತ ಗೋವಾ ಪ್ರವಾಸಕ್ಕೆ ತೆರಳಿದ್ದ  ಪತ್ರಕರ್ತ ಡಾ.ವೀರೇಶ್ ಹಿರೇಮಠ್ ಅವರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ, ಬಾಗಲಕೋಟೆಗೆ ಹಿಂತಿರುಗುವಾಗ ಅವರಿದ್ದ ಕಾರು ಅಪಘಾತಕ್ಕೀಡಾಗಿದೆ. ಮೃತರು ಪತ್ನಿ ಗೌರಿ, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಶಿಷ್ಯವರ್ಗವನ್ನು ಅಗಲಿದ್ದಾರೆ.

ವೀರೇಶ್ ಅವರಿದ್ದ ಕಾರು, ಖಾನಪುರ ತಾಲೂಕಿನ ನಂದಗಡ ಬಳಿ ಭಾನುವಾರ ಮುಂಜಾನೆ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ವೀರೇಶ್ ಅವರು ಮೃತಪಟ್ಟಿದ್ದಾರೆ.

ವೀರೇಶ್ ಅವರ ಪತ್ನಿ ಗೌರಿ ಕಾರು ಚಾಲಕ ಸುನೀಲ್ ಗೆ ಗಂಭೀರ ಗಾಯಗಳಾಗಿವೆ. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಗಾಯಗೊಂಡವರನ್ನು ಧಾರವಾಡದ ಸಿವಿಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Comments