ವಿಶ್ವ ದಾಖಲೆಗಳಿಗೆ ಸಾಕ್ಷಿಯಾದ ಮುಗಳಕೊಡ ಜಿಡಗಾ ಮಠ
ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲ್ಲೂಕಿನ ಮುಗಳಖೋಡ ಪಟ್ಟಣದ ಯಲ್ಲಾಲಿಂಗೇಶ್ವರ ಮಠದ ಆವರಣದಲ್ಲಿ ಪೂಜ್ಯ ಶ್ರಿ ಶಿದ್ಧರಾಮೇಶ್ವರ ಸಂಕಲ್ಪ ಯಾತ್ರೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಸ್ವಾಮೀಜಿಗಳ ಪಾದ ಪೂಜೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಈ ಬೃಹತ್ ಕಾರ್ಯಕ್ರಮದಲ್ಲಿ 770 ಮಹಾಸ್ವಾಮಿಗಳು ಭಾಗವಹಿಸಿದ್ದರು. ಇವರಲ್ಲಿ ಮುಗಳಖೋಡದ 360 ಸ್ವಾಮಿಜಿಗಳು ಪಾಲ್ಗೊಂಡಿದ್ದರು.
ವಿಶ್ವ ದಾಖಲೆ ಬರೆದ ಪಾದ ಪೂಜೆ ಕಾರ್ಯಕ್ರಮ:
ಮುಗಳಖೋಡದ ಮಠದಲ್ಲಿ ಶನಿವಾರ ನಡೆದ ಈ ಸಂಕಲ್ಪ ಯಾತ್ರೆಯ ಮತ್ತೊಂದು ವಿಶೇಷ ಸ್ವಾಮೀಜಿಗಳ ಪಾದ ಪೂಜೆ. ನೆರೆದಿರುವ 770 ಸ್ವಾಮೀಜಿಗಳಿಗೆ ಒಂದೆ ವೇದಿಕೆಯಲ್ಲಿ ದಂಪತಿಗಳು ಪಾದ ಪೂಜೆ ಮಾಡಿವಿಶ್ವ ದಾಖಲೆಯ ಕಾರ್ಯಕ್ರಮ ಮಾಡಿದರು.ಜೊತೆಗೇ ಎಲ್ಲ ಸ್ವಾಮೀಜಿಗಳಿಗೂ ತಲಾ 20 ಗ್ರಾಂ ಚಿನ್ನದ ನಾಣ್ಯಗಳನ್ನು ನೀಡಿದರು.
ದಾಖಲೆಯ 300ಕೆಜಿಯ ರಕ್ತದಾನ ತುಲಾಭಾರ:
ಶನಿವಾರ ನಡೆದ ತುಲಾಭಾರ ಕಾರ್ಯಕ್ರಮದಲ್ಲಿ ಮುಗಳಖೋಡದ ಡಾ.ಮುರುಘರಾಜೇಂದ್ರ ಸ್ವಾಮೀಜಿ ಅವರಿಗೆ ಮಠದ ಭಕ್ತಾದಿಗಳಿಂದ ಸುಮಾರು 300 ಕೆಜಿ ಅಷ್ಟು ಸ್ವಯಂ ಪ್ರೇರಿತ ರಕ್ತ ದಾನ ಮಾಡಿ ಅಪ್ಪಾಜಿ ಅವರ ತುಲಾಭಾರ ಮಾಡಿದರು. ಈ ಕಾರ್ಯಕ್ರಮವು ಕೂಡಾ ವಿಶ್ವ ದಾಖಲೆ ಸೃಷ್ಟಿಸಿದೆ.
ನಿನ್ನೆ ನಡೆದ ಈ ಶುಭ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಬಾಬಾ ರಾಮದೇವ್ ಗುರುಜಿ,ಹುಕ್ಕೇರಿ ಮಠದ ಶ್ರೀಗಳು, ಪ್ರಹ್ಲಾದ ಜೋಶಿ, ಸುರೇಶ್ ಅಂಗಡಿ, ಪಿ.ರಾಜೀವ್,ರೋಣ ಮತ ಕ್ಷೇತ್ರದ ಶಾಸಕರು ಸೇರಿದಂತೆ ಲಕ್ಷಾಂತರ ಭಕ್ತರು ಈ ಭವ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ನಿನ್ನೆ ಸಂಜೆ ನಡೆದ ಸಭೆಯಲ್ಲಿ ಸರಿಗಮಪ ಜುರಿ ಮೆಂಬರ್ ಜೋಗಿ ಸುನೀತಾ ಮತ್ತು ಅವರ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಘೋಡಗೆರಿ ಗ್ರಾಮದ ಲಕ್ಷ್ಮಿ ತಳವಾರ ಕೂಡಾ ಭಾಗವಹಿಸಿ ಹಾಡಿ ನೆರೆದಿದ್ದ ಲಕ್ಷಾಂತರ ಭಕ್ತರನ್ನು ರಂಜಿಸಿದರು.
ನೇರ ಪ್ರಸಾರ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ: ಮುಗಳಕೋಡ ದಿಂದ ನೇರ ಪ್ರಸಾರ