UK Suddi
The news is by your side.

ಸಂಕ್ರಾಂತಿಯ ಸಂಭ್ರಮ.

ಪೈರು ತೆಗೆಯುವ ಸಂದರ್ಭ
ಹಿರಿ ಹಿರಿ ಹಿಗ್ಗುವ ಖುಷಿಯ ಸುಗ್ಗಿ

ಎಳ್ಳು ಬೆಲ್ಲ ಬೀರುವ ಸಮಯ

ಮತ್ತದೋ ಬಂತು ನೋಡು ಸಂಕ್ರಾಂತಿ
ಕೆಟ್ಟ ಮನಗಳ ಕತ್ತಲ ಕೀಳರಿಮೆ ಬಿಡಿಸಲು

ಮುಂಜಾವಿನ ರಂಗೋಲಿ ಹಾಕುತ್ತಿರುವ ಲಲನೆಯರು

ಸಕ್ಕರೆಯ ಸಿಹಿ ಅಚ್ಚುಗಳ ಹಂಚಲು

ನಗೆ ತುಂಬಿ ಬೀರುವರು ಎಳ್ಳು ಬೆಲ್ಲ
ಆತ್ಮ ವಿಶ್ವಾಸ ನಿಲ್ಲಲು ಪುಟಿದೆದ್ದು

ಆಗಸಕ್ಕೆ ಗಾಳಿಪಟ ಹಾರಿಸುವ ಹುಡುಗರು

ತರುತ್ತಿಹರು ಬಾಳೆ ಕಬ್ಬಿನ ಜಲ್ಲೆಗಳ

ಅಂದದ ಮನಗಳ ಮನೆಗಳು ಈಗ ಶೃಂಗಾರ
ಬಣ್ಣ ಪಡೆದು ಶೃಂಗಾರಗೊಳ್ಳುತ್ತಿಹವು

ಕಿಚ್ಚು ಹಾರಲು ಕೆಚ್ಚೆದೆಯ ಎತ್ತು ಧನ ಕರುಗಳು

ಇನ್ನೇನು ಹೊರಡುವುದು ಹಬ್ಬದ ದಿಬ್ಬ

ಮೆರವಣಿಗೆ ಆಟೋಟಗಳ ಸಂಭ್ರಮ
ಉಕ್ಕಿ ಹರಿದಿದೆ ಹರ್ಷೊಲ್ಲಾಸ

ಪುಳಕಿತಗೊಂಡಿದೆ ಜಗದ ಮೈಮನ

ಬನ್ನಿ ಚೆನ್ನಾಗಿ ತಿಂದು ಎಳ್ಳು ಬೆಲ್ಲ

ಸದಾ ಮಾತಾಡೋಣ ಒಳ್ಳೆಯದನ್ನ.

 

ಬಸವರಾಜ ಕಾಸೆ
pradeepbasu93@gmail.com

Comments