UK Suddi
The news is by your side.

ನನ್ನ ರೈತರ ರಕ್ತವು

ನನ್ನ ರೈತರ ರಕ್ತವು.
———————–
ಕೇಳಲಿಲ್ಲ ಆಸ್ತಿ ಪಾಸ್ತಿ
ಬಯಸಲಿಲ್ಲ ಪದವಿ ಪಟ್ಟ
ಕಾರು ಬಂಗಲೆ ಬೇಡಲಿಲ್ಲ.
ಬೀದಿಗಿಳಿದರು ನನ್ನ ಜನರು.
ವರ್ಷವಿಡಿ ದುಡಿದ ಬೆಳೆಗೆ
ನ್ಯಾಯ ಬೆಲೆಗೆ ಕೂಗಿ ಕೊಂಡರು
ಬೀದಿ ಯುದ್ದಕೂ ಶಾಂತಿ ಘೋಷಣೆ
ಬೇಕು ಬೆಳೆವ ರೈತ ರಕ್ಷಣೆ
ದಂಡು ಸೇರಿತು ಬಡವರು .
ದುಡಿವ ಶ್ರಮಿಕ ಹಸಿದ ಹೊಟ್ಟೆ
ದಾರಿ ಕಾಣದ ಬಟ್ಟೆಯು.
ಗುಂಪು ಸಂಪು ಸೋಂಪು ಮೊಳಗಿತು
ಗಟ್ಟಿಗೊಂಡರು ಯೋಧರು.
ದುರುಳ ಮಂತ್ರಿ ಬಂದೂಕ ಸಪ್ಪಳ
ಗುಂಡು ಹಾರಿದವು ಎದೆಯ ಗುಂಡಿಗೆ
ನೋಡು ನೋಡುತ್ತಲೇ ಹರಿಯ ಹತ್ತಿತು
ನನ್ನ ರೈತರ ರಕ್ತವು.
ಮಣ್ಣಿನಲ್ಲಿ ಕುಸಿದು ಬಿದ್ದರು
ತಪ್ತವಾಯಿತು ಕೆಂಪು ನೆಲವು.
ಬೆವರು ರಕ್ತಕೆ ಬೆಲೆಯು ಕೊಡದವ
ಮಣ್ಣಾಗುವ ಬೇಗನೆ .
ವ್ಯರ್ಥವಲ್ಲ ನನ್ನ ರೈತ ರಕ್ತವು
ಕ್ರಾಂತಿ ಭಾಷೆಗೆ ಮುನ್ನುಡಿ
ರೈತ ರಾಜ್ಯವ ಕಟ್ಟುವೆವು
ಹೇಳಿ ಜೈ ಕಿಸಾನ ಚೆನ್ನುಡಿ.
————————————–
ಡಾ.ಶಶಿಕಾಂತ.ಪಟ್ಟಣ ರಾಮದುರ್ಗ.

Comments