UK Suddi
The news is by your side.

ಜಗವೆ ಕೂಡಲ ಸಂಗಮ

ಬಸವ ಬಳ್ಳಿಯ ಲಿಂಗ ಜಂಗಮ
ಜಗವೆ ಕೂಡಲ ಸಂಗಮ.
ಅರಿವೇ ಗುರುವು ,ನಡೆಯು ಲಿಂಗ
ನುಡಿಯೇ ಅಮರ ಜಂಗಮ .

ಅಂಗವಳಿದು ಲಿಂಗವಿಡಿದು
ಶರಣ ಬಾಳು ಸ್ಪಂದನ .
ಲಿಂಗ ಮಜ್ಜನ ಪಾದದುದಕ
ಅದುವೇ ಸ್ಪೂರ್ತಿಯ ಸಿಂಚನ .

ಸತ್ಯವೆಂಬುದೆ ನಿತ್ಯ ಪಠಣ,
ನೀತಿ ಪಾಠದ ಮಂಥನ .
ಬೆಳಕು ಹರಡಿದೆ ನೆಲದ ತುಂಬಾ
ಜಗದ ಬೇಡಿಕೆ ವಚನ ಚಿಂತನ .

ಒಂದು ಮಾಡಿದ ಹಿರಿದು ಕಿರಿದು
ಸಮತೆವೆಂಬ ದೀಪವು .
ಉಚ್ಹ ನೀಚ ಬೇಡ ಹರೆಯಿತು
ಅದುವೇ ಧರ್ಮ ಧೂಪವು .

ಗುಡಿಗಳೆಲ್ಲ ನಲುಗಿ ಹೋದವು
ವೇದ ಶಾಸ್ತ್ರ ಪುರಾಣವು .
ದಲಿತ -ಮಹಿಳೆ -ಅಸಹಾಯಕರು
ಬಸವ ಧರ್ಮದ ವಡೆಯರು .

ಜಿಡ್ಡುಗಟ್ಟಿದ ಕಟ್ಟು ಕಳಚಿತು
ಮುಕ್ತ ವಿಶ್ವದ ಪ್ರೇಮವು .
ಬಸವನುಸಿರೆ ನಮಗೆ ಮಂತ್ರ ,
ಲಿಂಗವಂತ ಸ್ವತಂತ್ರವು .

ಡಾ. ಶಶಿಕಾಂತ. ರು. ಪಟ್ಟಣ -ಪೂನಾ

Comments