UK Suddi
The news is by your side.

ಧಾರವಾಡ ಜಿಲ್ಲಾ ಪತ್ರಕರ್ತರ ಸಂಘದಿಂದ ಅಗಲಿದ ಪತ್ರಕರ್ತರಿಗೆ ಶ್ರದ್ಧಾಂಜಲಿ ಸಮರ್ಪಣೆ.

ಹುಬ್ಬಳ್ಳಿ: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಪತ್ರಕರ್ತರಾದ ವೀರೇಶ ಹಿರೇಮಠ ಹಾಗೂ ಮೌನೇಶ ಪೋತರಾಜ್ ಅವರಿಗೆ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಶೃದ್ಧಾಂಜಲಿ ಸಲ್ಲಿಸಲಾಯಿತು. ಅನುಮಾನಾಸ್ಪದವಾಗಿ ಸಾವನ್ನಪ್ಪಿದ ವಿರೇಶ ಹಿರೇಮಠ್ ಅವರ ಪ್ರಕರಣವನ್ನು ತನಿಖೆಗೆ ಒಳಪಡಿಸುವಂತೆ ಧಾರವಾಡ ಪತ್ರಕರ್ತರ ಸಂಘದಿಂದ ಹುಬ್ಬಳ್ಳಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಗಣಪತಿ ಗಂಗೊಳ್ಳಿ, ಗಿರೀಶ ಪಟ್ಟಣಶೆಟ್ಟಿ,ಮಹೇಂದ್ರ ಚವ್ಹಾಣ,ಜಾಕೀರ ಪಟ್ಟಣಕುಡಿ,ಗುರು ಹೂಗಾರ,ಅಕ್ಬರ್ ಬೆಳಗಾಂವಕರ್, ರಾಜೇಂದ್ರ ಪಾಟೀಲ,ಕೃಷ್ಣಾ ದಿವಾಕರ್,ರಾಜು ಮುದಗಲ್, ಪ್ರಕಾಶ ಮಹಾಜನಶೆಟ್ಟರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Comments