UK Suddi
The news is by your side.

ಮಹಾತ್ಮರ ಸಾಧನೆಗಳನ್ನು ಅರಿತು ಅವರ ಹಾದಿಯಲ್ಲಿ ಎಲ್ಲರೂ ಜೀವನ ಸಾಗಿಸಬೇಕು:ಸಚಿವ ವಿನಯ ಕುಲಕರ್ಣಿ.

ಧಾರವಾಡ: ಮಹಾಯೋಗಿ ವೇಮನರಂತಹ ಮಹಾತ್ಮರ ಜಯಂತಿಗಳ ಆಚರಣೆಯಿಂದ ಮಹಾನ ಸಾಧಕರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಅರಿತುಕೊಳ್ಳಬಹುದು. ಅವರ ಸಾಧನೆಗಳನ್ನು ಅರಿತು ಅವರ ಹಾದಿಯಲ್ಲಿ ಎಲ್ಲರೂ ಜೀವನ ಸಾಗಿಸಬೇಕು. ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಎಲ್ಲರೂ ಮುನ್ನಡೆಯಬೇಕು ಎಂದು ಗಣಿ, ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಲಕರ್ಣಿ ಅವರು ಹೇಳಿದರು. 
ಅವರು ನಿನ್ನೆ ಸಂಜೆ ನಗರದ ಸರಸ್ವತಪುರದ ಶ್ರೀ ವೆಂಕಟೇಶ್ವರ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಿದ್ದ ಶ್ರೀ ಮಹಾಯೋಗಿ ವೇಮನ ಜಯಂತ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಎಲ್ಲ ಸಮಾಜದವರು ಬೇರೆ ಬೇರೆ ಸಾಧಕರ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಯುವಕರು ಸಾಧಕರ ವಿಚಾರ, ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. 

ಎಲ್ಲ ಸಮಾಜದವರು ಬೇರೆ ಬೇರೆ ಸಮಾಜದವರೊಂದಿಗೆ ಸಹಕಾರ, ಸಹಬಾಳ್ವೆಯಿಂದ ಬೆರೆತು ನಡೆಯಬೇಕು. ಜಯಂತಿಗಳ ಆಚರಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿ, ಯಶಸ್ವಿಗೊಳಿಸಲು ಅಣಿಯಾಗಬೇಕು ಎಂದರು. 

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಮಹಾಯೋಗಿ ವೇಮನ ಅವರು ಯಾವುದೇ ಫಲಾಪೇಕ್ಷೆಯಿಲ್ಲದೇ ಜೀವನ ಸಾಗಿಸಿದವರು. ಅವರ ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು. ಸಮಾಜದ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು ಎಂದರು. 

ಪಾರಂಪರಿಕ ವೈದ್ಯರು ಮತ್ತು ನಿಸರ್ಗ ಚಿಕಿತ್ಸಾ ತಜ್ಞರಾದ ಡಾ.ಹನುಮಂತ ಮಳಲಿ ಅವರು ಶ್ರೀ ಮಹಾಯೋಗಿ ವೇಮನರ ಸಾಮಾಜಿಕ ಕೊಡುಗೆ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ. ಉಪಕಾರ್ಯದರ್ಶಿ ಎಸ.ಜಿ.ಕೊರವರ, ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ರಮೇಶ ಕೋನರಡ್ಡಿ, ಶೈಲಜಾ ಕಾಮರಡ್ಡಿ, ಸುಜಾತಾ ಕಾಲವಾಡ, ದೀಪಕ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

    

Comments