UK Suddi
The news is by your side.

ಕಾರಟಗಿಯಲ್ಲಿ ಆಕಸ್ಮಿಕ ಅಗ್ನಿ ಅವಘಡ:ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಶಿವರಾಜ್ ತಂಗಡಗಿ.

ಕೊಪ್ಪಳ:ಕನಕಗಿರಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾರಟಗಿಯ ನವಲಿ ಸರ್ಕಲನಲ್ಲಿ ನಿನ್ನೆ ಬೆಳಿಗ್ಗೆ ಆಕಸ್ಮಿಕವಾಗಿ ಅಗ್ನಿ ಅವಘಡದ ಸಂಭವಿಸಿದೆ. 

ಶಾಸಕರಾದ ಶಿವರಾಜ್ ತಂಗಡಗಿ ಅವರು ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ಥರಿಗೆ ಸಾಂತ್ವಾನ ಹೇಳಿದರು. 

ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸ್  ಹಾಗೂ ಅಗ್ನಿಶಾಮಕ ಅಧಿಕಾರಿಗಳೊಂದಿಗೆ ಹಾನಿಗೊಳಗಾದ ಅಂಗಡಿಗಳ ಕುರಿತು ಮಾಹಿತಿ ಪಡೆದುಕೊಂಡು, ಆಕಸ್ಮಿಕವಾಗಿ ಘಟನೆ ಸಂಭವಿಸಿದ್ದು, ಆ ಭಗವಂತನ ಕೃಪೆಯಿಂದ ಯಾವುದೇ ಪ್ರಾಣಪಾಯ ಸಂಭವಿಸಿದಿರುವುದು, ಸಮಧಾನದ ವಿಷಯವಾಗಿದೆ ಎಂದರು. ಸುಮಾರು ಅರ್ಧ ಘಂಟೆಗೂ ಹೆಚ್ಚು ಕಾಲ ಸ್ಥಳದಲ್ಲಿದ್ದ ಶಾಸಕರು, ನೊಂದ ಜನರಿಗೆ ಧೈರ್ಯವನ್ನು ಹೇಳುತ್ತಾ, ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಪರಿಹಾರವನ್ನು ಒದಗಿಸಿಕೊಡುತ್ತೇನೆಂದು ಭರವಸೆಯನ್ನು ನೀಡಿದರು.

Comments