UK Suddi
The news is by your side.

ಬಂದ್ ಗಳ ಹಿಂದೆ ಸರಕಾರದ ಕುಮ್ಮಕ್ಕು: ಜಗದೀಶ ಶೆಟ್ಟರ ಗಂಭೀರ ಆರೋಪ!

ಹುಬ್ಬಳ್ಳಿ: ಮಹದಾಯಿಗಾಗಿ ಕರೆ ನೀಡಲಾಗುತ್ತಿರುವ ಎಲ್ಲಾ ಬಂದ್‌ಗಳ ಹಿಂದೆ ಸರ್ಕಾರದ ಕುಮ್ಮಕ್ಕು ಇದ್ದು,  ಸಿಎಂ ಸಿದ್ದರಾಮಯ್ಯ ಅವರ ವ್ಯವಸ್ಥಿತ ಕುತಂತ್ರದಿಂದ ಬಂದ್‌ಗೆ ಕರೆ ನೀಡಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದರು. ಹುಬ್ಬಳ್ಳಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು
25 ರಂದು ರಾಜ್ಯ ಮತ್ತು ಫೆಬ್ರವರಿ 4 ರಂದು ಬೆಂಗಳೂರು ಬಂದ್‌ಗೆ ಕರೆ ಕೊಟ್ಟಿದ್ದಾರೆ. ಈ ಬಂದ್‌ಗೆ ಸಿಎಂ ಸಿದ್ದರಾಮಯ್ಯ ಬೆಂಬಲ ನೀಡಿದ್ದಾರೆ. ಈ ಎಲ್ಲ ಬಂದ್‌ಗಳು ಸರ್ಕಾರಿ ಪ್ರಾಯೋಜಿತ ಬಂದ್‌ಗಳಾಗಿವೆ ಎಂದು ದೂರಿದರು. 

ನಾವೂ ರಾಜಕೀಯ ಮಾಡಬಹುದು, ಮುಂಬರುವ ದಿನಗಳಲ್ಲಿ ರಾಹುಲ್‌ ಗಾಂಧಿ  ರಾಜ್ಯ ಪ್ರವಾಸ ಮಾಡಲಿದ್ದಾರೆ. ಆಗ ನಾವು ಕೂಡ ಬಂದ್‌ಗೆ ಕರೆಕೊಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

Comments