UK Suddi
The news is by your side.

ಶಾಂತಿ, ಏಕತೆ ಸಹೋದರತೆ, ಕೋಮು ಸೌಹಾರ್ದತೆ ಸಲುವಾಗಿ ಪಾದಯಾತ್ರೆ:ಇಸ್ಮಾಯಿಲ್ ತಮಟಗಾರ.

ಧಾರವಾಡ: ಶಾಂತಿ, ಏಕತೆ ಸಹೋದರತೆ, ಕೋಮು ಸೌಹಾರ್ದತೆ ಸಲುವಾಗಿ 69 ನೇ ಗಣರಾಜ್ಯೋತ್ಸವದ ಪ್ರಯುಕ್ತ ಧಾರವಾಡ ನಗರದಾಧ್ಯಂತ ಬೃಹತ ಪಾದಯಾತ್ರೆ ಹಮ್ಮಿಕೊಂಡಿದ್ದು ಈ ಪಾದಯಾತ್ರೆ 26 ರಂದು ಬೆಳಿಗ್ಗೆ 9-30 ಕ್ಕೆ ಕಲಾಭವನದಿಂದ ಆರಂಭವಾಗಲಿದೆ ಎಂದು ಧಾರವಾಡದ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ತಿಳಿಸಿದರು. ಧಾರವಾಡದ ಮೀಡಿಯಾ ಕ್ಲಬನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು. 
ಮನುಷ್ಯ ಮನುಷ್ಯನ ನಡುವೆ ದ್ವೇಷ ಅಸೂಯೆ, ಮನುಷ್ಯತ್ವವನ್ನೇ ಮಾರಿಕೊಳ್ಳುವ ಈ ಸಂದರ್ಭದಲ್ಲಿ ನಾವೆಲ್ಲಾ ಒಂದು, ಒಂದೆ ತಾಯಿಯ ಮಕ್ಕಳು ಎಂದು ಸಾರಿ ಹೇಳಲು ಈ ನಡಿಗೆ ಹಮ್ಮಿಕೊಂಡಿದ್ದೆನೆ.   ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಗುಣವಾಗಿ ಎಲ್ಲರನ್ನು,  ಎಲ್ಲ ಸಮಾಜದವರನ್ನು , ಎಲ್ಲ ಜಾತಿ ಧರ್ಮಗಳನ್ನು ಪರಸ್ಪರ  ಗೌರವಿಸುವ ಮೂಲಕ ಏಕತೆಯ ಸಂದೇಶ ಸಾರುವದು ಅವಶ್ಯವಾಗಿದೆ. ನಮ್ಮ ನಮ್ಮಗಳ ನಡುವೆ ಏಕತೆಯನ್ನು ಸಹೋದರತೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ಸದೃಡ ಭಾರತ ಕಟ್ಟಬೇಕಾಗಿದೆ. ಸ್ವಾತಂತ್ರ್ಯ ತಂದುಕೊಡಲು ರಕ್ತ ಹರಿಸಿದ ಅದೆಷ್ಟೋ ಮಹನಿಯರ ಕನಸಿನ ಭಾರತ ಕಟ್ಟಲು ನಾವೆಲ್ಲಾ ಶ್ರಮಿಸಬೇಕಾಗಿದೆ. ಹಾಗಾಗಿ ನಮ್ಮ ನಡಿಗೆ ಧಾರವಾಡದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಷ್ಟ್ರಪ್ರೇಮದ ಜೊತೆ ಜೊತೆಗೆ ಏಕತೆ ಶಾಂತಿ ಸಹೋದರತೆ ಕೋಮು ಸೌಹಾರ್ಧತೆ ಬಯಸಿ ನಡೆಯಲಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಶಾಂತಿ ಸೌಹಾರ್ಧತೆಗೆ ಧಕ್ಕೆ ಬಂದಿದ್ದು ನಾವೆಲ್ಲಾ ವಸುದೇವ ಕುಟುಂಬಕಂ ಎನ್ನುವ ನಿಟ್ಟಿನಲ್ಲಿ ಬದುಕುವದು ಅನಿವಾರ್ಯವಾಗಿದೆ. 

ಅನೇಕ ಯಶಸ್ವಿ ಹೋರಾಟಗಳಿಗೆ ಕನ್ನಡ ನೆಲ ಜಲ ಭಾಷೆಯ ಬಗ್ಗೆ ನಡೆದ ಹೋರಾಟಗಳಿಗೆ ದಿಟ್ಟ ಹೆಜ್ಜೆಯನ್ನಿಟ್ಟ ಧಾರವಾಡದ ನೆಲದಲ್ಲಿ ಏಕತೆ ಸಹೋದರತೆ ಕೋಮು ಸೌಹಾರ್ಧತೆ ಸಂದೇಶ ಸಾರಲು ಸಾವಿರ ಸಾವಿರ ಜನ ಬಲಿಷ್ಟ ಭಾರತದತ್ತ ಏಕತೆಯ ಭಾರತದತ್ತ ಹೆಜ್ಜೆ ಹಾಕಲಿದ್ದಾರೆ ಎಂದು ತಿಳಿಸಿದರು. ಎಲ್ಲರೂ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವ ಮೂಲಕ ನಮ್ಮ ನಡಿಗೆಯನ್ನು ಬೆಂಬಲಿಸಬೇಕೆಂದು ಗೌರವಪೂರ್ವಕವಾಗಿ ಬೇಡಿಕೊಳ್ಳುತ್ತೇನೆ ಎಂದು ಇದೇ ಸಂಧರ್ಭದಲ್ಲಿ ಅವರು ಮನವಿ ಮಾಡಿದರು.

Comments