24ರಂದು ರಬಕವಿ-ಬನಹಟ್ಟಿ ಸಂಪೂರ್ಣ ಬಂದ.
ರಬಕವಿ-ಬನಹಟ್ಟಿ:ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ನೇಕಾರರ ವಿವಿದ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಗರಸಭೆ ಮುಂದೆ ನಡೆಸುತ್ತಿರುವ ಅನಿರ್ದಿಷ್ಟಾವದಿ ಧರಣಿ ಸತ್ಯಾಗ್ರಹ ಇಂದಿಗೆ ಆರನೇಯ ದಿನಕ್ಕೆ ಕಾಲಿಟ್ಟಿದೆ.
ಹಲವಾರು ವರ್ಷಗಳಿಂದ ನೇಕಾರಿಕೆ ಕುಲ ಕಸಬು ಸರ್ಕಾರದಿಂದ ನಿರ್ಲಕ್ಷಕ್ಕೆ ಒಳಗಾಗಿದೆ.ನೇಕಾರರ ವಿವಿದ ಬೇಡಿಕೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬುದವಾರದಂದು ರಬಕವಿ-ಬನಹಟ್ಟಿ ಸಂಪೂರ್ಣ ಬಂದಗೇ ಕರೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ನೇಕಾರರ ಸಂಘ ತಿಳಿಸಿದೆ.
ಬುಧವಾರ ದಿವಸ ನಗರದ ಎಲ್ಲ ನೇಕಾರರು ಅವತ್ತಿನ ದಿನ ನೇಕಾರಿಕೆ ಸಂಪೂರ್ಣ ಬಂದ ಮಾಡುವ ಮೂಲಕ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ತಿಳಿಸಿದ್ದಾರೆ.