UK Suddi
The news is by your side.

ಕವಿ ಚಕ್ರವರ್ತಿ ರನ್ನ ಕವಿಯ ಜಯಂತಿ ಆಚರಣೆಗೆ ರಾಜ್ಯ ಕಾಂಗ್ರೆಸ್ ನಿರಾಸಕ್ತಿ:ಗೋವಿಂದ್ ಕಾರಜೋಳ

ಮುಧೋಳ: ಕವಿ ಚಕ್ರವರ್ತಿ ರನ್ನ ಕವಿಯ ಜಯಂತಿ ಆಚರಣೆಗೆ ರಾಜ್ಯ ಕಾಂಗ್ರೆಸ್ ನಿರಾಸಕ್ತಿ ತೋರಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.

ನಗರದ ರನ್ನ ಕ್ರೀಡಾಂಗಣದಲ್ಲಿ ಮುಧೋಳ ಮಹಿಳಾ ಸೌಹಾರ್ದ ಬ್ಯಾಂಕ್ ಆಯೋಜಿಸಿದ ಸಂಗೀತ ಸಂಭ್ರಮಕ್ಕೆ ಚಾಲನೆ ನೀಡಿ ಮಾಜಿ ಸಚಿವರು ಮಾತನಾಡಿದರು. ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಹಿಳಾ ಸೌಹಾರ್ದ ಬ್ಯಾಂಕ್ ಮಾಡುತ್ತಿದೆ ಬ್ಯಾಂಕಿನ ಕಾರ್ಯ ಅಭಿನಂದನೀಯ ಎಂದರು.ರನ್ನನನಾಡಿನಲ್ಲಿ ಮೂರು ದಿನಗಳ ಕಾಲ ರನ್ನ ವೈಭವ ವನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆಸಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಜಯಂತಿಯನ್ನು ಸ್ಥಗಿತಗೊಳಿಸಿದೆ. ಇದರಿಂದ ರನ್ನ ಕವಿಯ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಸರ್ಕಾರ ಕೂಡಲೇ ರನ್ನ ವೈಭವದ ದಿನಾಂಕವನ್ನು ಪ್ರಕಟಿಸಬೇಕೆಂದು ಆಗ್ರಹಿಸಿದರು.



ಕಾರ್ಯಕ್ರಮದಲ್ಲಿ ಭೂ ಸೇನೆಯ ನಿವೃತ್ತ ಉಪಮಹಾದಂಡನಾಯಕ ರಮೇಶ ಹಲಗಲಿ, ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ರಾಮಣ್ಣ ತಳೇವಾಡ, ಕಸಬಾಜಂಬಗಿಯ ರುದ್ರಮುನಿ ಶ್ರೀಗಳು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಗುರುರಾಜ ಕಟ್ಟಿ, ಬಿ.ಎಚ್. ಪಂಚಗಾಂವಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶಿವಾನಂದ ಉದಪುಡಿ, ಲಕ್ಷ್ಮಣ ಚಿಣ್ಣನ್ನವರ, ಪ್ರಶಾಂತ ಸಬರದ, ಮಹಾಂತೇಶ ಹಿಟ್ಟಿನಮಠ, ಜಿಪಂ ಸದಸ್ಯ ಭೀಮನಗೌಡ ಪಾಟೀಲ, ರತ್ನಕ್ಕ ತಳೇವಾಡ, ಸವಿತಾ ಅರಳಿಕಟ್ಟಿ, ಡಾ. ಸಿ.ಎಸ್. ಬಸರಡ್ಡಿ, ಭೀಮಸಿ ಮಗದುಮ, ಎಲ್.ಎಸ್.ತಳೇವಾಡ, ಟಿ.ವಿ. ಅರಳಿಕಟ್ಟಿ ಭಾಗವಹಿಸಿದರು.

Comments