ಫೆಬ್ರುವರಿ 17 ರಂದು ಕಾರವಾರ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ
ಕಾರವಾರ: ಕಾರವಾರ ತಾಲೂಕಿನ 6 ನೇ ಕನ್ನಡ ಸಾಹಿತ್ಯ ಸಮ್ಮೇಳವನ್ನು ಬರುವ ಫೆಬ್ರುವರಿ 17 ರಂದು ನಡೆಯಲಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ನಾಗರಾಜ್ ಹರಪನಹಳ್ಳಿ ಹೇಳಿದರು.
ಕಾರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕವು ಸೋಮವಾರ ಇಲ್ಲಿನ ಕನ್ನಡ ಭವನದಲ್ಲಿ ಸಭೆ ಸೇರಿ 6 ಸಮ್ಮೇಳನವನ್ನು ಕಳೆದ ಸಲಕ್ಕಿಂತ ವಿಭಿನ್ನವಾಗಿ ಹಾಗೂ ನಾಡು ನುಡಿಗೆ ಬಲ ಬರುವಂತೆ ರೂಪಿಸಬೇಕಾಗಿದೆ. ಕನ್ನಡ ಭಾಷೆಯ ಬನಿ ಹೆಚ್ಚಿಸಲು ಸದಸ್ಯರು ಸಲಹೆ ನೀಡಬೇಕೆಂದರು.
ನಿಕಟಪೂರ್ವ ಅಧ್ಯಕ್ಷರಾದ ರಾಮಾ ನಾಯ್ಕ ಮಾತನಾಡಿ ಕನ್ನಡ ನಾಡು ನುಡಿಗೆ ಹಲವು ನಿಟ್ಟಿನಿಂದ ಎಲೆ ಮರೆಯ ಕಾಯಂತೆ ಕೆಲಸ ಮಾಡಿದವರು ಇದ್ದಾರೆ. ಶಿಕ್ಷಕರು ಇದ್ದಾರೆ, ವಿವಿಧ ಕ್ಷೇತ್ರದಲ್ಲಿದ್ದು, ಸಾಹಿತ್ಯ ರಚನೆ ಹೊರತು ಪಡಿಸಿ ಕನ್ನಡ ಹೋರಾಟಗಳಲ್ಲಿ ಇರುವವರನ್ನು ಸಮ್ಮೇಳನಾಧ್ಯಕ್ಷತೆಗೆ ಪರಿಗಣಿಸೊಣ, ಸಮ್ಮೇಳವನ್ನು ಕಳೆದ ಸಲ ಗ್ರಾಮಾಂತರ ಭಾಗದಲ್ಲಿ ಮಾಡಿದ್ದು, ಈ ಸಲ ನಗರ ಪ್ರದೇಶದಲ್ಲಿ ಮಾಡೋಣ ಎಂದರು.