UK Suddi
The news is by your side.

ಸತ್ಯ ನಿತ್ಯ ಸಾಯುತ್ತಿದೆ.


ಸತ್ಯ ನಿತ್ಯ ಸಾಯುತ್ತಿದೆ

ತತ್ವ ಶಿಲುಬೆಗೇರುತ್ತಿದೆ

ನೆಲ ಕಚ್ಚುತ್ತಿದೆ ವೈಚಾರಿಕತೆ

ಸೋಲು ಪ್ರಗತಿಪರತೆ 

ಸಿದ್ದಾಂತಗಳ ಸಮಾಧಿ 

ಸಮತೆಯ ಉಸಿರುಗಟ್ಟಿದೆ 

ಜಡ ಕರ್ಮಠರ ಸಂಭ್ರಮ 

ಸಂಪ್ರದಾಯವಾದಿಗಳ ಕೇಕೆ

ಮುಖವಾಡಗಳ ಅಟ್ಟಹಾಸ 

ದುಷ್ಟ ಪೌರೋಹಿತ್ಯರ ಪೋಷಣೆ 

ಭ್ರಷ್ಟ ರಾಜಕಾರಣಿಗಳ ಶೋಷಣೆ 

ಚುನಾವಣೆ ಹಣ ಹಂಚಿಕೆ 

ಮೌಢ್ಯ ಕಂಧಾಚಾರಗಳ  ರಕ್ಷಣೆ 

ಸಂಸತ್ತು ಸಭೆ ಗದ್ದಲದ ಮಧ್ಯೆ

ಪಂಚವಾರ್ಷಿಕ ಯೋಜನೆ .

ದಶಕಗಳು ಉರುಳಿದವು 

ನಿಂತಿಲ್ಲ ಬಡತನದ ರೋಧನೆ

ಐದು ವರ್ಷಕ್ಕೊಮ್ಮೆ ಸಾಲಿನಲ್ಲಿದ್ದೇವೆ

ಅಸಹಾಯಕ ಪ್ರಜೆ ಮೂಕ ವೇದನೆ.

ಬೇಕಿಲ್ಲ ಬದಲಾವಣೆ ಪರಿವರ್ತನೆ 

ಮಾಡಲಿಲ್ಲ ಬುದ್ಧ ಬಸವರ ಪಾಲನೆ 

ಸತ್ಯ ನಿತ್ಯ ಸಾಯುತ್ತಿದೆ

ತತ್ವ ಶಿಲುಬೆಗೇರುತ್ತಿದೆ

——————————–

ಡಾ.ಶಶಿಕಾಂತ.ಪಟ್ಟಣ -ರಾಮದುರ್ಗ

Comments