UK Suddi
The news is by your side.

ನಾಳೆ ಕರ್ನಾಟಕ ಬಂದ್: ಏನೇನ್ ಇರುತ್ತೆ, ಏನೇನ್​ ಇರಲ್ಲ..?

 

ಬೆಂಗಳೂರು: ಮಹದಾಯಿ ವಿವಾದಕ್ಕೆ ಎಳ್ಳು ನೀರು ಬಿಡಬೇಕು. ಕರ್ನಾಟಕಕ್ಕೆ ಮಹದಾಯಿ ನೀರು ಹರಿಸಬೇಕು ಎಂದು ಒತ್ಥಾಯಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್​ಗೆ ಕರೆ ನೀಡಿವೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೂ ಕರ್ನಾಟಕ ಬಂದ್ ನಡೆಯಲಿದೆ..

ಕರ್ನಾಟಕ ಬಂದ್ ಹಿನ್ನೆಲೆ ಏನೇನ್​ ಇರಲ್ಲ..?

– ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

– ಸರ್ಕಾರಿ ಶಾಲಾ-ಕಾಲೇಜುಗಳಿಗೆ ಪರಿಸ್ಥಿತಿ ನೋಡಿಕೊಂಡು ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡುತ್ತಾರೆ.

–  80 ಸಾವಿರ ಓಲಾ, ಊಬರ್​ ಕ್ಯಾಬ್​ಗಳು ಓಡಾಡಲ್ಲ

–  ಸಿನಿಮಾ ಥಿಯೇಟರ್​ಗಳು ಇರಲ್ಲ.. ಶೂಟಿಂಗ್​ಗಳು ಸ್ಥಗಿತವಾಗುತ್ತೆ..

–  ಬೆಂಗಳೂರು ವಿವಿ ಪರೀಕ್ಷೆಗಳು ನಾಳೆ ನಡೆಯಲ್ಲ

ಕರ್ನಾಟಕ ಬಂದ್​ ಇದ್ದರೂ ಏನೆಲ್ಲ ಇರುತ್ತೆ ಎಂಬುದರ ಪಟ್ಟಿ ಇಲ್ಲಿದೆ.

– ಕೆಎಸ್ಆರ್​ಟಿಸಿ, ಬಿಎಂಟಿಸಿ ಬಸ್ ಓಡಾಟ ಎಂದಿನಂತೆ ಇರುತ್ತದೆ

– ಮೆಟ್ರೋ ರೈಲು, ಲಾರಿ, ಸರಕು ವಾಹನ, ಆಟೋ ಸಂಚಾರ ಇರುತ್ತದೆ

– ಬ್ಯಾಂಕ್, ಹೋಟೆಲ್, ಪೆಟ್ರೋಲ್ ಬಂಕ್​​ಗಳು ತೆರೆದಿರುತ್ತವೆ

– ಆಸ್ಪತ್ರೆಗಳು, ಮೆಡಿಕಲ್ ಶಾಪ್, ಗಾರ್ಮೆಂಟ್ಸ್​ಗಳು ತೆರೆದಿರುತ್ತವೆ

– ಕೈಗಾರಿಕೆಗಳು, ಐಟಿಬಿಟಿ ಕಂಪನಿಗಳು ಕೆಲಸ ನಿರ್ವಹಿಸುತ್ತೆ

– ಟೂರಿಸ್ಟ್​ ವಾಹನಗಳು ಯಥಾಸ್ಥಿತಿಯಲ್ಲಿ ಓಡಾಟ ನಡೆಸುತ್ತವೆ

– ಎಪಿಎಂಸಿ, ಮಾರುಕಟ್ಟೆ, ಅಂಗಡಿ ಮುಂಗಟ್ಟು ತೆರೆದಿರುತ್ತವೆ

Comments