UK Suddi
The news is by your side.

ಅನ್ನದಾತ ಇನ್ನೇನು ಬೇಕು??

ಅನ್ನದಲ್ಲಿ ಬ್ರಹ್ಮನ ಕಂಡು
ಅಧಿಕಾರಕ್ಕಾಗಿ ನಿನ್ನನ್ನು

ಬ್ರಹ್ಮಾಸ್ತ್ರವಾಗಿಸಿಲ್ಲವೇ?

ನಿನಗಿನ್ನೇನು ಬೇಕು??
ಚುನಾವಣೆಗೆ

ನಿನ್ನನ್ನು ಬಂಡವಾಳ

ಮಾಡಿಕೊಂಡಿಲ್ಲವೇ?

ನಿನಗಿನ್ನೇನು ಬೇಕು??
ಐದು ವರ್ಷಕ್ಕೊಮ್ಮೆ

ಉತ್ಸವ ಮೂರ್ತಿಯಂತೆ

ನಿನ್ನನ್ನ ಮೆರೆಸುತ್ತಿಲ್ಲವೇ?

ನಿನಗಿನ್ನೇನು ಬೇಕು??
ಅಧಿಕಾರ ಹಿಡಿಯುವಾಗ

ಪ್ರಮಾಣಕ್ಕಾಗಿ ನಿನ್ನನ್ನ

ದೇವರ ಸಮ ಕಂಡಿಲ್ಲವೇ?

ನಿನಗಿನ್ನೇನು ಬೇಕು??
ನಮ್ಮ ಸಾಚಾತನ ತೋರಿಸಲು

ಮಾತಿಗೂ ಮುಂಚೆ

ನಿನ್ನ ಹೆಸರೆತ್ತುತ್ತಿಲ್ಲವೇ?

ನಿನಗಿನ್ನೇನು ಬೇಕು??
ಮತ್ತೆ ಗದ್ದುಗೆ ಏರಬೇಕಿದೆ

ನಮ್ಮ ಮಾತಿನ

ಬಣ್ಣವಾಗು ಸಾಕು

ನಿನಗಿನ್ನೇನು ಬೇಕು??
ನಿನ್ನ ಗೋಳು,ಸಾಲ,ಸಾವು

ಇದೆಲ್ಲ ಯಾರಿಗೆ ಬೇಕು?ನೀನಂತೂ ನಮಗೆ ಇಷ್ಟಕ್ಕೇಸಾಕು

ನಿನಗಿನ್ನೇನು ಬೇಕು??
-ಪ್ರತಿಭಾ ಪಾಟೀಲ ಬೀರಲದಿನ್ನಿ

ವಕೀಲರು, ಬ.ಬಾಗೇವಾಡಿ

Comments