UK Suddi
The news is by your side.

ಖ್ಯಾತ ನಾಟಕ ಕಲಾವಿದ ಗುರುಲಿಂಗಪ್ಪ ಚಿಂಚಲಿ ಅವರಿಗೆ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ.

ರಬಕವಿ-ಬನಹಟ್ಟಿ:ಸಮೀಪದ ಜಗದಾಳ ಗ್ರಾಮದ ಅಪ್ಪಟ ಗ್ರಾಮೀಣ ಪ್ರತಿಭೆ ನಾಟಕ ಕಲಾವಿದ ಗುರಲಿಂಗಪ್ಪ ಸಿದ್ದಪ್ಪ ಚಿಂಚಲಿ ಯವರಿಗೆ ಕರ್ನಾಟಕ ಸರಕಾರ ಜಿಲ್ಲಾಡಳಿತ ಬಾಗಲಕೋಟ ಇವರ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ನೀಡುವ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಾಟಕ ಕ್ಷೇತ್ರದಲ್ಲಿ ಅವರು 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ಸಿಂಧೂರ ಲಕ್ಷಣ ಪಾತ್ರದಲ್ಲಿ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿದ್ದಾರೆ.


ಅವರ ಸಾಧನೆಗೆ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವದು ಅವರ ಸಾಧನೆಗೆ ಸಂದ ಗೌರವ. ಪ್ರಶಸ್ತಿ ಲಭಿಸಿರುವದಕ್ಕೆ ಸಚಿವರಾದ ಶ್ರೀಮತಿ ಉಮಾಶ್ರೀ, ಮಾರುತಿ ಸೋರಗಾಂವಿ,ಮಹಾಲಿಂಗಪ್ಪ ಕರಡಿ,ಶಂಕರ ಸೋರಗಾಂವಿ,ಸೇರಿದಂತೆ ಹಲವಾರು ಗಣ್ಯರು ಅಭಿನಂದಿಸಿದ್ದಾರೆ.

Comments