UK Suddi
The news is by your side.

ಗೌರವದಿಂದ ಪದ್ಮಶ್ರೀ ಪ್ರಶಸ್ತಿ ನಿರಾಕರಿಸಿದ ಸಿದ್ದೇಶ್ವರ ಸ್ವಾಮೀಜಿ

ವಿಜಯಪುರ: ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ‘ಪದ್ಮಶ್ರೀ’ ಪ್ರಶಸ್ತಿಗೆ ಪುರಸ್ಕೃತಗೊಂಡಿದ್ದು, ಅದನ್ನು ಗೌರವವಾಗಿ ಹಿಂತಿರುಗಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

‘ಈ ಹಿಂದೆಯೂ ಹಲ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ ಕೊಡುವುದಾಗಿ ತಮ್ಮನ್ನು ಸಂಪರ್ಕಿಸಿ, ‘ಗೌರವ್ ಡಾಕ್ಟರೇಟ್’ ಸ್ವೀಕರಿಸುವಂತೆ ಮನವಿ ಮಾಡಿದ್ದವು. ಹಲ ಸಂಘ–ಸಂಸ್ಥೆಗಳು ಪ್ರಶಸ್ತಿ ನೀಡಲು ಮುಂದಾಗಿದ್ದವು. ಆ ಸಂದರ್ಭ ಅವರಿಗೆಲ್ಲ ನಮಗೆ ಯಾವುದೂ ಬೇಡ ಎಂದು ಹೇಳಿದ್ದೆವು ಎಂದು ಸ್ವಾಮೀಜಿ ಹೇಳಿದ್ದಾರೆ.

ಇದೀಗ ಕೇಂದ್ರ ಸರ್ಕಾರ ನಮ್ಮನ್ನು ಸಂಪರ್ಕಿಸದೆ ‘ಪದ್ಮಶ್ರೀ’ ಘೋಷಿಸಿದೆ. ಗುರುತಿಸಿದ್ದಕ್ಕೆ ಅನಂತ ಧನ್ಯವಾದ. ಸಮಾಜದಲ್ಲಿ ಅಸಾಧಾರಣ ಸೇವೆಗೈದ ಸಾಧಕರಿದ್ದಾರೆ. ಅಂತಹವರಿಗೆ ಇದನ್ನು ನೀಡಿದರೆ ಒಳ್ಳೆಯದು. ನಮಗ ಇದರ ಅವಶ್ಯಕತೆಯಿಲ್ಲ’ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

Comments