UK Suddi
The news is by your side.

ದೊಡವಾಡದ ಜ್ಞಾನಜ್ಯೋತಿ ಕಾನ್ವೆಂಟ್ ಶಾಲೆಯಲ್ಲಿ 69ನೇ ಗಣರಾಜ್ಯ ದಿನಾಚರಣೆ.

ಬೈಲಹೊಂಗಲ: ತಾಲೂಕಿನ ದೊಡವಾಡದ ಜ್ಞಾನಜ್ಯೋತಿ ಕಾನ್ವೆಂಟ್ ಶಾಲೆಯಲ್ಲಿ 69ನೇ ಗಣರಾಜ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಗ್ರಾಮದ ಹಿರಿಯರಾದ ಮಲ್ಲಪ್ಪ ಯರಿಕಿತ್ತೂರ, ಇಂದಿನ ಮಕ್ಕಳಲ್ಲಿ ಸಂವಿಧಾನದ ಅರಿವು, ಪಾಲನೆ ಅತಿಮುಖ್ಯವಾಗಿದ್ದು, ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವ ಬದುಕಿನ ಮೂಲತತ್ವವೆಂದು ನಂಬಿದ್ದ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್‍ರಂತ ಸತ್ಪುರುಷರ ಆದರ್ಶಗಳನ್ನು ಮೈಗೂಢಿಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ ಎಸ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಜಿ ಐ ಅಂಗಡಿ, ಸಂವಿಧಾನದ ಹಕ್ಕು ಹಾಗೂ ಕರ್ತವ್ಯಗಳನ್ನು ಭಾರತೀಯರಾದ ನಾವು ಅನುಪಾಲನೆ ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ನಿಂಗಪ್ಪ ಚೌಡನ್ನವರ ಸಂವಿಧಾನ ನಮ್ಮ ಸ್ವತ್ತು, ಸ್ಫೂರ್ತಿ ಹಾಗೂ ಬಲವಾಗಿದ್ದು, ನಮ್ಮ ರಾಷ್ಟ್ರದ ರಕ್ಷಣೆಯಲ್ಲಿ ಭಾರತೀಯ ಸೈನಿಕರ ಸೇವೆ ಅನನ್ಯವೆಂದ ಅವರು, ವಿದ್ಯಾರ್ಥಿಗಳು ಶಿಕ್ಷಣ ಪಡೆದು ಸಂವಿಧಾನದ ಅಡಿಯಲ್ಲಿ ರಾಷ್ಟ್ರಕ್ಕೆ ಗೌರವ ಸೂಚಿಸಬೇಕೆಂದರು.

ಪ್ರಧಾನ ಭಾಷಣ ಮಾಡಿದ ಶಾಲಾ ಮುಖ್ಯ ಶಿಕ್ಷಕರಾದ ಎಂ ಬಿ ಕರಿಕಟ್ಟೀ “ಸಂವಿಧಾನದ ಪರಿಚಯವನ್ನು ಮಾಡಿಕೊಡುತ್ತಾ, ಡಾ|| ಬಿ.ಆರ್.ಅಂಬೇಡ್ಕರ್‍ರ ಹಿತನುಡಿಯಾದ ನನ್ನ ಸಂವಿಧಾನವು ಪ್ರಪಂಚದಲ್ಲಿಯೇ ಉತ್ತಮವಾಗಿದ್ದು, ಮುಂದೆ ಬರುವ ಸರ್ಕಾರಗಳು ಇದನ್ನು ಯಥಾವತ್ತಾಗಿ ಜಾರಿ ಮಾಡಿದ್ದೇ ಆದಲ್ಲಿ ಕೇವಲ 20 ವರ್ಷಗಳಲ್ಲಿ ಭಾರತವೊಂದು ಸೂಪರ್ ಪವರ್ ರಾಷ್ಟ್ರವಾಗಲಿದೆ ಎಂದಿದ್ದರು ಹಾಗೂ ಈ ದೇಶದ ಸರ್ಕಾರ ಅಲ್ಪಸಂಖ್ಯಾತವಾಗಿರುವ ಶ್ರೀಮಂತರ ಕೈಯಲ್ಲಿ ಇರದೆ, ಬಹುಸಂಖ್ಯಾತದಲ್ಲಿರುವ ಬಡವರ ಕೈಯಲ್ಲಿದ್ದರೆ ಆಗ ಈ ನಮ್ಮ ದೇಶವು ಜಾತ್ಯಾತೀತ, ಗಣತಂತ್ರ, ಸಮಾಜವಾದಿ, ಪ್ರಜಾಪ್ರಭುತ್ವ ರಾಷ್ಟ್ರವಾಗಲಿದೆ ಎಂಬುದು ಅಂಬೇಡ್ಕರ್‍ರ ಆಶಯವಾಗಿತ್ತೆಂದರು.
ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು,ಗಣರಾಜ್ಯೋತ್ಸವದ ಕುರಿತಾದ ಭಾಷಣ ಮೂಡಿ ಬಂದವು.ನಂತರ ಪ್ರಸಕ್ತ ಸಾಲಿನಲ್ಲಿ ವಿವಿದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ,ಆಟೋಟಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಲ್ಲೂರ ಆರುಡ ವಿದ್ಯಾಶ್ರಮದ ಮಾತೊಶ್ರೀ ಲಲಿತಮ್ಮ ತಾಯಿಯವರು ವಹಿಸಿದ್ದರು, ಇದೇ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿಗಳಾದ ರುದ್ರಪ್ಪ ಕೋಟಗಿ,ಲಕ್ಷ್ಮಣ ಮಜಲಗುಡ್,ಹಣಮಂತ ಚಂದರಗಿ,ಬಸವರಾಜ ಧಾರವಾಡ,ಪಿ ಕೆ ಪಿ ಎಸ್ ನಿರ್ದೇಶಕರಾದ ಗಧಿಗೆಪ್ಪ ಶಿವದೂತನವರ, ವಿಠ್ಠಲ ಕಾಳಿ, ಉತ್ತರ ಕರ್ನಾಟಕ ಸುದ್ದಿ ಸಂಪಾದಕರಾದ ಗುರು ಅರಳಿಮರದ,ಗ್ರಂಥಪಾಲಕರಾದ ಅಲ್ಲಿಸಾಬ್ ಹುಬ್ಬಳ್ಳಿ, ಶಾಲಾ ಶಿಕ್ಷಕ ವೃಂದ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಮಲ್ಲಮ್ಮ ಅಂದಾನಶೆಟ್ಟಿ ತಂಡ ಪ್ರಾರ್ಥಿಸಿ,ವಿದ್ಯಾರ್ಥಿಯಾದ ಕು.ಮಹೇಶ್ ಸಣ್ಣಕ್ಕಿ    ಸ್ವಾಗತಿಸಿ,ವಿದ್ಯಾರ್ಥಿನಿಯಾದ ಕು.ಸ್ನೇಹಾ ಸಪ್ಪಡ್ಲಿ    ನಿರೂಪಿಸಿ,ವಂದಿಸಿದರು.

-ಗುರು ಎಸ್ ಎ

Comments