ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿಗಳಿಗೆ ಮತ್ತು ಕರ್ನಾಟಕದ ಸೂಫಿ ಸಂತ ಇಬ್ರಾಹಿಂ ಸುತಾರ್ ಸೇರಿ ಕರ್ನಾಟಕಕ್ಕೆ 8 ಪದ್ಮಶ್ರೀ ಪ್ರಶಸ್ತಿ
ನವದೆಹಲಿ:69ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪದ್ಮ ಪ್ರಶಸ್ತಿಗಳು ಪ್ರಕಟಗೊಂಡಿವೆ. ರಾಜ್ಯಕ್ಕೆ ಒಟ್ಟು 8 ಪದ್ಮಶ್ರೀ, 1 ಪದ್ಮಭೂಷಣ ಪ್ರಶಸ್ತಿ ಸಿಕ್ಕಿದೆ.
ಆಧ್ಯಾತ್ಮಿಕ ಕ್ಷೇತ್ರದಲ್ಲಿ ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ಸಿದ್ಧೇಶ್ರರ ಸ್ವಾಮೀಜಿಗಳಿಗೆ,ಕರ್ನಾಟಕದ ಸೂಫಿ ಸಂತರೆಂದೆ ಖ್ಯಾತಿ ಹೊಂದಿರುವ ಇಬ್ರಾಹಿಂ ಸುತಾರ್ ಅವರಿಗೆ ಪದ್ಮಶ್ರೀ ಗೌರವ ಸಿಕ್ಕಿದೆ.
ಕಲೆ ಮತ್ತು ಸಾಹಿತ್ಯ ವಿಭಾಗದಲ್ಲಿ ಪ್ರೊ.ದೊಡ್ಡರಂಗೇಗೌಡ ,ಸಮಾಜ ಸೇವೆ ವಿಭಾಗದಲ್ಲಿ ಸೀತವ್ವ ಜೊಡ್ಡಟ್ಟಿ, 1500ಕ್ಕೂ ಹೆಚ್ಚು ಉಚಿತ ಹೆರಿಗೆ ಮಾಡಿಸಿರುವ ಸೂಲಗಿತ್ತಿ ನರಸಮ್ಮ, ಕಲೆ ಮತ್ತು ಸಂಗೀತ ಕ್ಷೇತ್ರದಲ್ಲಿ ಆರ್.ಸತ್ಯನಾರಾಯಣ, ಎಸ್.ಆರ್. ತಾರನಾಥನ್, ಆರ್.ಎನ್. ತ್ಯಾಗರಾಜನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ.
ಇದೇ ಸಂದರ್ಭದಲ್ಲಿ ಕರ್ನಾಟಕದ ಸ್ನೂಕರ್ ಹಾಗೂ ಬಿಲಿಯರ್ಡ್ ಪಟು ಪಂಕಜ್ ಅಡ್ವಾಣಿಗೆ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ.