ಬಸವ ಮಹಾ ಮನೆ
ಬಸವ ಮಹಾ ಮನೆ
ವಚನಗಳ ಸಂಪುಟವು
ಅಳಿದುಳುಳಿದು ತಾಡೋಲೆ
ಸಾವಿನಲಿ ಬೇಗೆಯಲಿ
ರಕ್ಷಿಸಿದ ಶರಣರು .
ಮತ್ತೆ ಪುರೋಹಿತರ ಕಾಟ
ಕರ್ಮಠರ ಸಂಚು ಮುಗಿಯಲಿಲ್ಲ
ಬಸವ ಮಹಾ ಮನೆ
ಬಸವ ಧರ್ಮ ಹಾಳಾಗಿ
ಹೋಗಲೆಂದು ಅಟ್ಟಿದರಯ್ಯ
ವಿಪ್ರರು ಶೋಷಕರು
ಮತ್ತೆ ಮರ್ತ್ಯಕ್ಕೆ ಬಂದರಯ್ಯಾ
ನಮ್ಮ ಅಕ್ಕ ಮಾತೆ
ಸ್ವಾಮಿ ಶರಣರು
ಲಾಂಛನಗಳ ಅಬ್ಬರ
ಕಾವಿಗಳ ಕಾರಬಾರ
ವಚನ ಕದ್ದರು ತಿದ್ದಿದರು.
ದುಡ್ದು ಮಾಡಿದರು
ಮೇಳ ವಚನೋತ್ಸವ
ಜಾತ್ರೆ ಹಬ್ಬಗಳು
ಸಾರೋಟಿಗೆ ಮೆರವಣಿಗೆ.
ಬಚ್ಚ ಬರಿಯ ಬಸವನು
ಮತ್ತೆ ಮೌನವಾದನು
-ಡಾ.ಶಶಿಕಾಂತ.ಪಟ್ಟಣ ಪುಣೆ