UK Suddi
The news is by your side.

ಮಹಾತ್ಮಾ ಗಾಂಧಿ ಅಂಬೇಡ್ಕರಂತ ನಾಯಕರು ಕಟ್ಟಿದ ಭವ್ಯ ಬಾರತದ ಕನಸನ್ನು ನನಸು ಮಾಡಲು ನಾವು ಮುಂದೆ ಬರಬೇಕಾಗಿದೆ: ಸಾಹಿತಿ ಶ್ರೀಧರ್ ಆಸಂಗಿಹಾಳ

ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿ ನೂತನ ತಾಲೂಕಿನಲ್ಲಿ “ಸಂವಿಧಾನ ರಕ್ಷಿಸಿ ದೇಶ ಉಳಿಸಿ ” ಎಂಬ ಕಾರ್ಯಕ್ರಮದಲ್ಲಿ ಸಮಸ್ತ ದೇವರಹಿಪ್ಪರಗಿ ಸಂಘಟನೆಗಳು ಭಾಗವಹಿಸಿದ್ದವು.  

ಇತ್ತೀಚಿನ ದಿನಮಾನಗಳಲ್ಲಿ ಸಂವಿಧಾನದ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಿರುವುದ ಅತ್ಯಂತ ಅಮಾನವೀಯವಾದದ್ದು ಈ ರೀತಿಯಾಗಿ ರಾಜಕಾರಣಿಗಳಿರಲಿ ಯಾರೇ ಮಾತನಾಡಲಿ ಅಂತವರಿಗೆ ತಕ್ಕಶಿಕ್ಷೆಯಾಗಲೇಬೇಕ.ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವುದು.ಯಾರಾದರೂ ಸಂವಿಧಾನಕ್ಕೆ ಅವಮಾನವಾಗುವ ರೀತಿಯಲ್ಲಿ ಮಾತಾನಾಡಿದರೆ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು.ದೇಶದ ವ್ಯವಸ್ಥೆಯನ್ನು ಸುಸ್ಥಿತಿಯಾಗೀಡಲು ಸಹಕರಿಸಬೇಕು.ಬುದ್ಧ ಬಸವಣ್ಣನವರಿಂದ ಹಿಡಿದು ಅಂಬೇಡ್ಕರ ಯಗದವರೆಗೂ ಸಾಮಾಜಿಕ ವ್ಯವಸ್ತೆಯನ್ನು ಹೋರಾಟ ಸಂಘಟನೆ ಶಾಂತಿ ಮೂಲಕ ಪ್ರತಿಕ್ಷಣ ದೇಶಕ್ಕಾಗಿ ದುಡಿದು ಮಿಡಿಯುವ ಸಹೃದಯವಂತರ ನಾಡಲ್ಲಿ ಇಂದು ಅಶಾಂತಿ ತಲೆದೋರಿದೆ.ಅದಕ್ಕಾಗಿ ಇಂದಿನ ಯುವಕರು ಸಂವಿಧಾನದ ಹಕ್ಕು ಬದ್ಧಗಳಿಗೆ ನಾವೆಲ್ಲಾ ಶ್ರಮಿಸಬೇಕು.ಮಹಾತ್ಮಾ ಗಾಂಧಿ ಅಂಬೇಡ್ಕರಂತ ನಾಯಕರು ಕಟ್ಟಿದ ಭವ್ಯ ಬಾರತದ ಕನಸನ್ನು ನನಸು ಮಾಡಲು ನಾವು ಮುಂದೆ ಬರಬೇಕಾಗಿದೆ ಎಂದು ಸಾಹಿತಿ ಶ್ರೀಧರ್ ಆಸಂಗಿಹಾಳ ಹೇಳಿದರು..

ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ಸಂಗಮೇಶ ಛಾಯಾಗೋಳ ದೇಸಾಯಿ,ಬಶೀರ ಸೇಠ ಬೇಪಾರಿ,ಉಮೇಶ ರೂಗಿ,ರಾವುತ ತಳಕೇರಿ,ವಾಸೀಮ ಬೇಪಾರಿ,ಬಸವರಾಜ ಪಾಟೀಲ,ಹಾಗೂ ಸರ್ವಸಂಘಟನೆಯ ಮುಖಂಡರೂ ಪಾಲ್ಗೊಂಡಿದ್ದರು.

Comments