UK Suddi
The news is by your side.

ಮಾನವಿಯ ಮೌಲ್ಯಗಳನ್ನೊಳಗೊಂಡ ಮೌಲಿಕ ಶಿಕ್ಷಣವನ್ನು ಸಹಿತ ಕಲಿಸಲು ಶಿಕ್ಷಕ ವರ್ಗ ಶ್ರಮಿಸಬೆಕು:ಎಸ್ ಆರ್ ಪಾಟೀಲ

ಬಾಗಲಕೋಟ:ಮಕ್ಕಳಿಗೆ  ಪಠ್ಯ ಶಿಕ್ಷಣ ಎಷ್ಟು ಮುಖ್ಯವೋ? ಅದೇ ರೀತಿ ಮಾನವಿಯ ಮೌಲ್ಯಗಳನ್ನೊಳಗೊಂಡ ಮೌಲಿಕ ಶಿಕ್ಷಣವನ್ನು ಸಹಿತ ಕಲಿಸಲು ಶಿಕ್ಷಕ ವರ್ಗ ಶ್ರಮಿಸಬೆಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎಸ್ ಆರ್ ಪಾಟಿಲ್ ಕರೆ ನೀಡಿದರು.
ಇಂದು ಸಾಯಂಕಾಲ ಬಾಪೂಜಿ ಅಂತರರಾಷ್ಟ್ರೀಯ ವಸತಿ ಶಾಲೆ ಹಾಗೂ ಬಾಪೂಜಿ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯ ಬಾಡಗಂಡಿ ಇವರ ಆಶ್ರಯದಲ್ಲಿ ಹಮ್ಮಿಕೊಂಡ ಸಾರ್ಥಕ ಸಂಭ್ರಮ – 8 ವಾರ್ಷಿಕ ಸ್ನೇಹ ಸಮ್ಮೇಳನ ಸಾರ್ಥಕ ನುಡಿ ನಮನ 6 ಪ್ರಶಸ್ತಿ ಪ್ರದಾನ ಸಮಾರಂಭ  ಉದ್ಘಾಟಿಸಿ ಅವರು ಮಾತನಾಡಿದರು.

ದಿ.ಶ್ರೀಮತಿ ಈರಮ್ಮ ರುದ್ರಗೌಡ ಪಾಟೀಲ ಇವರ ಸ್ಮರಣಾರ್ಥ (ಅಬ್ಬೆ ಪ್ರಶಸ್ತಿ)

ದಿ.ಶ್ರೀ ರುದ್ರಗೌಡ ಗುರುಸಿದ್ದಪ್ಪಗೌಡ ಪಾಟೀಲ ಇವರ ಸ್ಮರಣಾರ್ಥ(ಕೃಷಿ ಪ್ರಶಸ್ತಿ) ಪಡೆದ ಗಣ್ಯರಿಗೆ ಅಭಿನಂದಿಸಿದರು.


ಈ ಸಂದರ್ಭದಲ್ಲಿ ಬಾಪೂಜಿ ಅಂತರರಾಷ್ಟ್ರೀಯ ವಸತಿ ಶಾಲೆ,ಬಾಪೂಜಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರು,ಉಪನ್ಯಾಸಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Comments