ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು
ಬೆಂಗಳೂರು: ತುಮಕೂರಿನ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಕೊಂಚ ಏರುಪೇರು. ಕೆಮ್ಮು, ಶೀತ, ಕಫದಿಂದ ಸಿದ್ದಗಂಗಾ ಸ್ವಾಮೀಜಿ ಬಳಲಿಕೆಯಾಗಿದೆ ಎಂದು ಹೇಳಲಾಗುತ್ತಿದ್ದು, ಇಂದು ಬೆಳಗ್ಗಿನ ಪೂಜಾ ಕಾರ್ಯಗಳನ್ನೂ ಮಾಡಿರಲಿಲ್ಲ. ಮಧ್ಯರಾತ್ರಿ ಸುಮಾರು ಎರಡು ಗಂಟೆಯಿಂದ ಇವರು ಕೆಮ್ಮುತ್ತಿದ್ದು, ರಾತ್ರಿಯಿಡೀ ಎಚ್ಚರವಾಗೇ ಇದ್ದರು.
ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆಗೆ ಬಿಜಿಎಸ್ ಆಸ್ಪತ್ರೆಗೆ ಅವರನ್ನು ಕರೆತರಲಾಗಿದೆ. ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ವೈದ್ಯರು ತಪಾಸಣೆಗೆ ಸಿದ್ಧತೆ ನಡೆಸಿದ್ದಾರೆ. ಡಾ.ರವೀಂದ್ರ ನೇತೃತ್ವದ ತಂಡದಿಂದ ಶ್ರೀಗಳ ತಪಾಸಣೆ ನಡೆಯಲಿದೆ.