‘ಎಡಕಲ್ಲೂ ಗುಡ್ಡದ ಮೇಲೆ’ ಖ್ಯಾತಿಯ ಹಿರಿಯ ನಟ ಚಂದ್ರಶೇಖರ್ ಇನ್ನಿಲ್ಲ.
ಬೆಂಗಳೂರು: ಚಂದನವನದ ಹಿರಿಯ ನಟ ಹಾಗೂ ಎಡಕಲ್ಲು ಗುಡ್ಡದ ಮೇಲೆ ಚಿತ್ರ ಖ್ಯಾತಿಯ ಚಂದ್ರಶೇಖರ್ ಅವರು ಹೃದಯಾಘಾತದಿಂದ ವಿದೇಶದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಕನ್ನಡ ಚಿತ್ರರಂಗದಲ್ಲಿ ಸುಮಾರು 63ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಕೆನಡಾದಲ್ಲಿದ್ದ ಚಂದ್ರಶೇಖರ್ ಇಂದು ಮುಂಜಾನೆ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಚಂದ್ರಶೇಖರ್ ಅವರು ಪತ್ನಿ ಶೀಲಾ, ಪುತ್ರಿ ಧಾನ್ಯ ಅವರನ್ನು ಅಗಲಿದ್ದಾರೆ. ಚಂದ್ರಶೇಖರ್ ಅವರು ಹಲವಾರು ವರ್ಷಗಳಿಂದ ಕುಟುಂಬದೊಂದಿಗೆ ಕೆನಡಾದಲ್ಲೇ ವಾಸವಿದ್ದರು. 10 ದಿನಗಳ ಹಿಂದಷ್ಟೇ ಚಂದ್ರಶೇಖರ್ ಅವರು ಬೆಂಗಳೂರಿಗೆ ಬಂದು ಕೆನಡಾಕ್ಕೆ ವಾಪಸ್ಸಾಗಿದ್ದರು.
ಅವರ ಈ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.