UK Suddi
The news is by your side.

ಬೆಳಗಾವಿ:ಪದ್ಮಾವತ್ ಚಿತ್ರ ಪ್ರಸಾರವಾಗುತ್ತಿರುವ ವೇಳೆ ಥಿಯೇಟರ್ ಮೇಲೆ ಸೀಮೆ ಎಣ್ಣೆ ಬಾಂಬ್ ದಾಳಿ ಮಾಡಿದ ಕಿಡಗೆಡಿಗಳು.

ಬೆಳಗಾವಿ: ಮೊದಲಿನಿಂದಲೇ ವಿವಾದ ಸೃಷ್ಟಿಸಿರುವ ಪದ್ಮಾವತ್‌ ಚಿತ್ರ ಪ್ರದರ್ಶನ ವಿರೋಧಿಸಿ ನಗರದ ಪ್ರಕಾಶ್ ಚಿತ್ರಮಂದಿರದ ಮೇಲೆ ಕಿಡಗೆಡಿಗಳು ಸೀಮೆಎಣ್ಣೆ ಬಾಟಲ್ ಬಾಂಬ್ ಎಸೆದಿದ್ದಾರೆ.

ನಿನ್ನೆ ಪ್ರಕಾಶ್ ಚಿತ್ರಮಂದಿರದಲ್ಲಿ ಪದ್ಮಾವತ್ ಚಿತ್ರ ಪ್ರದರ್ಶನ ನಡೆಯುತ್ತಿರುವ ಸಮಯದಲ್ಲಿ ಸೀಮೆ ಎಣ್ಣೆ ಬಾಂಬ್ ಎಸೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಅದೃಷ್ಟವಶಾತ್‌ ಇದು ಸ್ಫೋಟಗೊಳ್ಳದ ಪರಿಣಾಮ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.ಪದ್ಮಾವತ್ ಚಲನಚಿತ್ರ ಪ್ರದರ್ಶನ ಮುಂದುವರೆದಿದ್ದು, ಪ್ರೇಕ್ಷಕರು ಆತಂಕಗೊಂಡಿದ್ದಾರೆ. 

ಪ್ರಕಾಶ ಚಿತ್ರಮಂದಿರಕ್ಕೆ  ಶಹಪೂರ್ ಪೊಲೀಸರು ಭೇಟಿ ನೀಡಿ ಪರಿಶೀಲಿಲನೇ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments