UK Suddi
The news is by your side.

ಮೂಢ ನಂಬಿಕೆಗಳಿಂದ ಹೊರಗೆ ಬಂದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ:ರಮೇಶ ಜಾರಕಿಹೊಳಿ

ಅಥಣಿ: ಹಳ್ಳಿಗಳಲ್ಲಿ ದೇವಸ್ಥಾನಗಳ ಬದಲು  ಶಾಲೆಗಳನ್ನು ಕಟ್ಟುವ ಕೆಲಸ ಮೊದಲು ಆಗಬೇಕು. ಮೂಢ ನಂಬಿಕೆಗಳಿಂದ ಹೊರಗೆ ಬಂದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ  ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ದಡ್ಡಿ ಸಿದ್ದೇಶ್ವರ ದೇವಸ್ಥಾನ ಕಮೀಟಿ ಹಾಗೂ ಅಥಣಿ ತಾಲೂಕು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಅಥಣಿಯ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ಶುಕ್ರವಾರ ಹಮ್ಮಿಕೊಂಡ  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ  ಬಲಿದಾನ  ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು  ಮಾತನಾಡಿದರು,
ಅಥಣಿ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಗಾಗಿ ಹುಡುಕಾಟ ನಡೆದಿದೆ.  ಯೋಗ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಸಚಿವ ರಮೇಶ ಇದೇ ಸಂದರ್ಭದಲ್ಲಿ ತಿಳಿಸಿದರು.
ಉಪನ್ಯಾಸಕ ನಿಕೇತರಾಜ ಮೌರ್ಯ ಮಾತನಾಡಿ ರಾಯಣ್ಣ ಎಂದರೆ ಉತ್ಸಾಹದ ಒಂದು ಶಕ್ತಿ. ರಾಯಣ್ಣನ ಸಮಾಧಿ ಸ್ಥಳ ಸ್ಮಾರಕವಾಗಬೇಕು. ಸ್ಫೂರ್ತಿಯ ಸಂಕೇತವಾಗಬೇಕು. ದೇಶ ಪ್ರೇಮಕ್ಕೆ ಪ್ರೇರಣೆಯಾಗಬೇಕು ಎಂದರು.

ಹಣಮಾಪುರ ಕವಲಗುಡ್ಡದ ಅಮರೇಶ್ವರ ಮಹಾರಾಜರು, ಅಥಣಿ ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅತಿಥಿಗಳಾಗಿ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಲಪ್ಪ ಮೇತ್ರಿ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ, ಕಾಂಗ್ರೆಸ್ ಧುರೀಣ ಶ್ರೀಮಂತ ಪಾಟೀಲ, ಎಂ.ಡಿ.ಲಕ್ಷ್ಮೀ ನಾರಾಯಣ, ಆಶಾ ಐಹೊಳೆ, ಶಹಜಹಾನ್ ಡೊಂಗರಗಾಂವ್, ಡಾ.ರಾಜೇಂದ್ರ ಸಣ್ಣಕ್ಕಿ, ಲಕ್ಷ್ಮಣರಾವ್ ಚಿಂಗಳೆ, ಶ್ರೀಶೈಲ ದಳವಾಯಿ, ಕಾಂತಾ ನಾಯಿಕ, ಎಸ್.ಕೆ.ಬುಟಾಳಿ, ಎಸ್.ಎಂ.ನಾಯಿಕ,  ವಕೀಲ ಬಿ.ಎನ್.ದಳವಾಯಿ, ಕುರುಬರ ಸಂಘದ ಅಧ್ಯಕ್ಷ ರಾವ್ ಸಾಹೇಬ ಬೇವನೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Comments