ಜಮಖಂಡಿ:ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಸಿದ್ದು ನ್ಯಾಮಗೌಡ.
ಜಮಖಂಡಿ:ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮಕ್ಕೆ ಶಾಸಕರಾದ ಸಿದ್ದು ನ್ಯಾಮಗೌಡ ಚಾಲನೆ ನೀಡಿದರು. ಬಳಿಕ ಮಾತನಾಡಿ, ಲಸಿಕೆ ಹಾಕಿಸುವುದರಿಂದ ಮಕ್ಕಳು ಅಂಗವಿಕಲತೆ ತಪ್ಪಿಸಬಹುದು. ಅಂಗವಿಕಲತೆಯನ್ನು ಯಾವ ವ್ಯಕ್ತಿಯೂ ಬಯಸುವುದಿಲ್ಲ. ಇದನ್ನು ಹೋಗಲಾಡಿಸಲು ಸಮಾಜ ಸದಾ ಪಣತೊಡಬೇಕು. ಮಕ್ಕಳಿಗೆ ಕಾಲಕ್ಕೆ ತಕ್ಕಂತೆ ರೋಗ ನಿರೋಧಕ ಚುಚ್ಚುಮದ್ದು, ಲಸಿಕೆಗಳನ್ನು ಕೊಡಿಸುವ ಜವಾಬ್ದಾರಿ ಪೋಷಕರದ್ದು ಎಂದು ಹೇಳಿದರು.
ನಂತರ ಮಾತನಾಡಿದ ಅವರು, ಪಲ್ಸ್ ಪೋಲಿಯೊ ಯೋಜನೆಯು ಮಹತ್ತರವಾದುದು. ಮಕ್ಕಳಿಗೆ ಕಾಡುವ ಭಯಂಕರ ರೋಗ. ಈ ರೋಗವನ್ನು ತಡೆಗಟ್ಟಬೇಕಾದರೆ ಮಕ್ಕಳಿಗೆ 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಸರಕಾರ ಆರೋಗ್ಯ ಇಲಾಖೆ ಮುಖಾಂತರ ಉಚಿತವಾಗಿ ಹಾಕಿಸಿ ಮಕ್ಕಳಿಗೆ ಬರುವ ಪೋಲಿಯೊ ರೋಗವನ್ನು ತಡೆಗಟ್ಟಿ ಎಂದು ಹೇಳಿದರು.
ತಾಲೂಕ ವೈದ್ಯಾಧಿಕಾರಿಗಳು,ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.