UK Suddi
The news is by your side.

ಬರದ ನಾಡಿಗೆ.

ಬರದ ನಾಡಿಗೆ 
ನೀರು ತಂದರು 

ಬಿಸಿಲು  ತಣಿಸಿದ 

ಮಲ್ಲನ ಗೌಡರು 

ಶತಮಾನದ ಬೇಗೆಗೆ

ತಂಪು ಎರಕ 

ಬಿರುಕು ಬಿಟ್ಟ ಭೂಮಿಗೆ 

ಸೀಳು ನೆಲವು 

ತೃಪ್ತವಾಯಿತು

ಹರಿದು ಬಂದ ಗಂಗೆಗೆ .

ಹಸಿದ ಒಡಲಿಗೆ 

ಹಸಿರು ಕನಸು

ಅರಳಿ ನಿಂತವು

ಮುಗ್ಧ ಮನಸು 

ಬಡತನ ಹರಿದು ಹೋಯಿತು

ಸಿರಿತನದ   ಭಾಗ್ಯವು .

ಬಸವ ಭೂಮಿಯು 

ಸಮತೆ ಕಂಡಿತು 

ಸತ್ಯ ಶಾಂತಿ ಪ್ರೀತಿಯು .

ಗೆದ್ದು ಬರಲಿ 

ದಿಟ್ಟ ನಾಯಕ 

ಮುತ್ತಿನಂತ ಧೀರನು.

ಬರದ ನಾಡಿಗೆ 

ನೀರು ತಂದರು.

———————–

-ಡಾ.ಶಶಿಕಾಂತ.ಪಟ್ಟಣ -ರಾಮದುರ್ಗ 

ಗೌರವ ಸಂಪಾದಕರು,ಉತ್ತರ ಕರ್ನಾಟಕ ಸುದ್ದಿ.
(ಡಾ.ಎಂ ಬಿ ಪಾಟೀಲರು ಅಭಿನವ ಭಗೀರಥವೆಂದೇ ಪ್ರಸಿದ್ಧಿ ಪಡೆದವರು . ಕರ್ನಾಟಕದ ಇತಿಹಾಸದಲ್ಲಿಯೇ ಇಷ್ಟೊಂದು ದೊಡ್ಡ ಮಟ್ಟದ ಹಣವನ್ನು ನೀರಾವರಿಗೆ  ಕಾಯ್ದಿಡಿಸಿ ಅದರ ಸದ್ಬಳಕೆ ಮಾಡಿ ವಿಜಯಪುರ ತಿಕೋಟಾ ಬಬಲೇಶ್ವರ ಸುತ್ತಲಿನ ಗ್ರಾಮಗಳು ಇಂದು ಭರವಸೆಯ ಕನಸಿನಲ್ಲಿದ್ದಾರೆ ಅವರೆಲ್ಲರ ಹರಕೆ ಆಶೀವಾದಗಳು ಶ್ರೀ ಮಲ್ಲನಗೌಡ ಬಸನಗೌಡ ಪಾಟೀಲ ಇವರ ಮೇಲಿವೆ  .   ಕೊಟ್ಟ ಮಾತನ್ನು ನಡೆಸಿಕೊಟ್ಟು ಬರದ ನಾಡಾದ ವಿಜಯಪುರಕ್ಕೆ ನೀರನ್ನು ಹರಿಸಿ ಅಭಿನವ ಭಗೀರಥನೆನಿಸಿಕೊಂಡು   ಜಿಲ್ಲೆಯ ಎಲ್ಲ ಕೆರೆಗಳಲ್ಲಿ ನೀರು ತುಂಬುವಂತೆ ಮಾಡಿ ,ಒಣಗಿದ ನೆಲದಲ್ಲಿ ಹಸಿರು ಕ್ರಾಂತಿಗೈದ ನಮ್ಮೆಲ್ಲರ ಪ್ರೀತಿಯ ಜನನಾಯಕ ಡಾ ಎಂ ಬಿ ಪಾಟೀಲರು ಹೀಗೆ ಜನಪರ ಕಾರ್ಯಕ್ರಮಗಳನ್ನು ಮಾಡಲಿ ಅವರ ಎಲ್ಲ ಸೃಜನ ಸಕ್ರಿಯ ಕಾರ್ಯಗಳಿಗೆ ಸದಾ ನಮ್ಮ ಬೆಂಬಲವಿದೆ.

-ಡಾ ಶಶಿಕಾಂತ ಪಟ್ಟಣ.ರಾಮದುರ್ಗ

ಗೌರವ ಸಂಪಾದಕರು,ಉತ್ತರ ಕರ್ನಾಟಕ ಸುದ್ದಿ.


Comments