ಜಮಖಂಡಿ:ಕೃಷ್ಣಾ ತೀರದ ರೈತರ ಸಭೆ.
ಜಮಖಂಡಿ:ತಾಲೂಕಿನ ಆಲಗೂರಿನ ಚಂದ್ರವ್ವ ತಾಯಿ ದೇವಸ್ಥಾನದಲ್ಲಿ ಕೃಷ್ಣಾ ತೀರ ರೈತ ಸಂಘದ ಸಭೆ ಜರುಗಿತು.
ಶ್ರಮಬಿಂದುಸಾಗರಕ್ಕೆ ನೀರು ತುಂಬಿಸುತ್ತಿರುವ ಕಾರ್ಯದ ಸಮಗ್ರ ಮಾಹಿತಿಯನ್ನು ಸಭೆಯಲ್ಲಿ ತಿಳಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೃಷ್ಣಾ ತೀರ ರೈತ ಸಂಘದ ಕಾರ್ಯದರ್ಶಿ ಹಾಗು ಶಾಸಕರಾದ ಸಿದ್ದು ನ್ಯಾಮಗೌಡ “ಈಗಾಗಲೇ ಇರುವ ಪಂಪ್ಸೆಟ್ಗಳ ಜೊತೆಗೆ 180ಎಚ್ಪಿ ಸಾಮಥ್ರ್ಯದ 4 ಪಂಪ್ಸೆಟ್ಗಳನ್ನು ಅಳವಡಿಸಲಾಗಿದ್ದು ಇದರಿಂದ ಇನ್ನೂ ಹೆಚ್ಚುವರಿ ನೀರನ್ನು ಎತ್ತಿಹಾಕಲಾಗುತ್ತಿದೆ. ಪ್ರತಿ ದಿನ ಸುಮಾರು 0.3ಟಿಎಮ್ಸಿ ನೀರು ಬಳಕೆಯಾಗುತ್ತಿದ್ದು ಅಂದಾಜು 0.8ಟಿಎಮ್ಸಿ ನೀರನ್ನು ತುಂಬಿಸಲಾಗುತ್ತಿದೆ. ಫೆಬ್ರುವರಿ 15ರ ವರೆಗೆ ನೀರು ಎತ್ತಿಹಾಕುವ ಮೂಲಕ ಒಟ್ಟು 4ಟಿಎಮ್ಸಿ ನೀರು ಸಂಗ್ರಹಿಸಲಾಗುತ್ತಿದೆ, ಇದರಿಂದ ಮೇ ತಿಂಗಳಿನ ಅಂತ್ಯದ ವರೆಗೆ ನದಿಯಲ್ಲಿ ನೀರು ಉಳಿಸುವ ಪ್ರಯತ್ನ ನಮ್ಮದು”ಎಂದು ಹೇಳಿದರು.
ಬರುವ ಫೆಬ್ರುವರಿ-ಮಾರ್ಚ ತಿಂಗಳಿನಲ್ಲಿ ಪ್ರತಿ ಶನಿವಾರ ರಾತ್ರಿ 10ಘಂಟೆಯಿಂದ ಸೋಮವಾರ ಬೆಳೆಗ್ಗೆ 6ಘಂಟೆವರೆಗೆ ಮತ್ತು ಎಪ್ರೀಲ್-ಮೇ ತಿಂಗಳಲ್ಲಿ ಕೇವಲ ಭಾನುವಾರ ಒಂದು ದಿನ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸ್ಥಗಿತಗೊಳಿಸುವ ಸಭೆಯ ತೀರ್ಮಾನಕ್ಕೆ ಫಲಾನುಭವಿ ರೈತರೆಲ್ಲರು ಸಭೆಗೆ ಸರ್ವಾನುಮತದ ಒಪ್ಪಿಗೆ ನೀಡಿದರು.
ನದಿ ತುಂಬಿಸಲು ತಗಲುವ ವೆಚ್ಚವನ್ನು ಭರಿಸಲು ರೈತರೆಲ್ಲರೂ ಸೇರಿ ಪ್ರತಿ ಟನ್ ಕಬ್ಬಿಗೆ 20 ರಂತೆ ವಂತಿಗೆ ನಿಡುವದಾಗಿ ರೈತರು ಒಮ್ಮತದ ನಿರ್ಣಯ ತೆಗೆದುಕೊಂಡರು.
ಈ ಸಂದರ್ಭದಲ್ಲಿ ರೈತರು, ಗುರುಹಿರಿಯರು, ವಿವಿಧ ಕಾರ್ಖಾನೆಗಳ ಪ್ರತಿನಿಧಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು