UK Suddi
The news is by your side.

ವಚನ ಸಾಹಿತ್ಯ ಮತ್ತು ಅವಘಡಗಳು 

ನಿನ್ನೆ ಮೊನ್ನೆ ಲಿಂಗಾಯತ ಧರ್ಮದ ಶ್ರೇಷ್ಠ ಸ್ಕಾಲರ್ ಒಬ್ಬರು ಬರೆದ ಪುಸ್ತಕದ ಅವಘಡಗಳ ಬಗ್ಗೆ ನಾನು ಗ್ರೂಪ್ ನಲ್ಲಿ ಹಾಕಿದ್ದೆ.
ವಚನಾಧಾರಿತ ಧರ್ಮ ನೀತಿ -ಶೀರ್ಷಿಕೆಗೂ ಅಲ್ಲಿನ ಪ್ರಸ್ಥಾಪನೆಗೂ   ಯಾವುದೇ ಸಂಬಂಧವಿಲ್ಲ .ಅದನ್ನು ಬರೆದವರು ನಮ್ಮ ಮಧ್ಯದ ಹಿರಿಯ ಸಂಶೋಧಕರು.

ಪ್ರಕಟಿಸಿದವರು ಉತ್ತರ ಕರ್ನಾಟಕದ ಶ್ರೇಷ್ಠ ಬಸವ ತತ್ವ ಮಠವಾಗಿದೆ. ಅಷ್ಟೇ ಅಲ್ಲ ಅದನ್ನು ನಾಡಿನ ಹೆಸರಾಂತ ಪತ್ರಿಕೆ ವಿಮರ್ಶಿಸಿದವರು ನಮ್ಮ ಮಧ್ಯದ ಸಂಪಾದಕಿ ಚಿಂತಕರು .

ಅಕ್ಕನ ಅರಿವಿನಲ್ಲಿ ರುದ್ರಮ್ಮ ಸುನೀತಾ ಮೇಡಂ  ಮತ್ತು ಉಜ್ವಲ ಮೇಡಂ ತನದವ ಮೂರ್ತಿ ಮತ್ತು ಸುರೇಶ ಅವರನ್ನು ಹೊರತು ಪಡಿಸಿದರೆ  ಹೊರತು ಪಡಿಸಿದರೆ ಉಳಿದವರು ಜಾಣ ಮೌನ ವಹಿಸಿದ್ದರು.ಯಾಕೆ ಬೇಕು ಸಂಘರ್ಷ ನಡೆಯುವ ವಿದ್ಯಮಾನಗಳನ್ನು ನೋಡಿಯೂ ನೋಡದಂತೆ ಕಣ್ಣು ಮುಚ್ಚಿರುವ 

ನಮ್ಮ ಲಿಂಗಾಯತ ಮುಖಂಡರಿಗೆ ಸವಿಸ್ತಾರವಾಗಿ ವಿವರಿಸುವೆನು. ಅದನ್ನು ಪರಿಶೀಲಿಸುತ್ತಿದ್ದಾರೆ.ಅವರಿಂದ ಸಕಾರಾತ್ಮಕವಾದ ಭರವಸೆ ಬಂದಿವೆ ನೋಡೋಣ. ಒಟ್ಟಾರೆ ಇಂತಹ ವಿವಾದಾಸ್ಪದ ಕೃತಿಗಳ ಪುನರ್ ಪರಿಶೀಲನೆ ಅತ್ಯಗತ್ಯವಾಗಿದೆ.

ಒಬ್ಬ ವ್ಯಕ್ತಿಯ ಪ್ರತಿಷ್ಠೆಗೆ ಕಟಿ ಬಿದ್ದು ಧರ್ಮ ಇತಿಹಾಸವನ್ನು ಚರಿತ್ರೆಯನ್ನು ನಾವು ತಿರುಚಿದವರನ್ನು ಸಹಿಸಿಕೊಂಡಿದ್ದೇವೆ.

ತಪ್ಪು ಮಾಡುವವನಿಗಿಂತಾ ತಪ್ಪು ಕಂಡು ಸಹಿಸುವುದು ಅತ್ಯಂತ ದೊಡ್ಡ ತಪ್ಪು.

ಇಂತವರ ಬಗ್ಗೆ ನನಗೆ ಜಿಗುಪ್ಸೆ ಬರುತ್ತಿದೆ.

ಹೇಡಿಗಳ ಮದ್ಯೆ ಬದುಕಿದ್ದೇವೆ ಎಂಬ ಅಸಹ್ಯಕರ ವಾತಾವರಣ ನಿರ್ಮಾಣವಾಗುತ್ತಿದೆ. ಇದೆ ಕಾರಣಕ್ಕೆ ಡಾ ಎಂ ಎಂ ಕಲ್ಬುರ್ಗಿ ಬಲಿಯಾದರು.

ಡಾ ಎಂ ಎಂ ಕಲಬುರ್ಗಿ ಅವರು ಯಾವುದೇ ಸಲಹೆ ಸೂಚನೆಯನ್ನುನೀಡಿದರೂ  ಅತ್ಯಂತ ಸರಳವಾಗಿ ಸಹಜವಾಗಿ ತೆಗೆದುಕೊಳ್ಳುತ್ತಿದ್ದರು ಅಂತಹ ಹೃದಯ ವೈಶಾಲ್ಯವು ಈಗಿನವರಿಗಿಲ್ಲ.

ಮಠಗಳು ಪ್ರಕಟ ಮಾಡುವ ಮುನ್ನ ನೋಡಬೇಕಿತ್ತು.

ವಿಮರ್ಶಕರು   ಪತ್ರಿಕೆಗೆ ಪರಿಚಯಿಸುವ ಮುನ್ನ ಸರಿಯಾಗಿ ಅಧ್ಯಯನ ಮಾಡಿರಬೇಕು.

ಇವರೆಲ್ಲ  ಮಾಡಿರುವ ಅವಘಡಗಳಿಗೆ ನಾವು ಮೂಕ ಪ್ರೇಕ್ಷಕರು 

ಡಾ.ಶಶಿಕಾಂತ.ಪಟ್ಟಣ ರಾಮದುರ್ಗ

Comments