ಸರಕಾರದಿಂದ ರಾಜ್ಯದಲ್ಲಿ ಮಿನಿ ತಾಲಿಬಾನ್ ನಿರ್ಮಾಣ: ಸಿ.ಟಿ. ರವಿ
ಚಿಕ್ಕಮಗಳೂರು: ಅಪರಾಧ ಪ್ರಕರಣಗಳಲ್ಲಿಯೂ ಜಾತಿ ಹುಡುಕುವ ಕೆಲಸ ಮಾಡಿದ ಮೊದಲ ಸರಕಾರವಿದ್ದರೆ ಅದು ರಾಜ್ಯದ ಕಾಂಗ್ರೆಸ್ ಸರಕಾರ. ಜಾತ್ಯತೀತತೆಯ ಹೆಸರಿನಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಮಿನಿ ತಾಲಿಬಾನ್ ನಿರ್ಮಿಸಲು ಮುಂದಾಗಿದೆಯೇ? ಎಂಬ ಅನುಮಾನ ಕಾಡುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರಕಾರ ಕೋಮುಗಲಭೆಗೆ ಕಾರಣರಾದವರ ವಿರುದ್ಧದ ಪ್ರಕ ರಣಗಳನ್ನು ಜಾತಿ ಹೆಸರಿನಲ್ಲಿ ಹಿಂಪಡೆ ದುಕೊಂಡಿದೆ. ಕ್ರೈಮ್ಗಳಿಗೆ ಜಾತಿ, ಜನಾಂಗ ಎಂಬುದೆಲ್ಲ ಇರುವುದಿಲ್ಲ. ಈ ರೀತಿ ಪ್ರಕರಣಗಳನ್ನು ವಾಪಸ್ ಪಡೆಯುವ ಮೂಲಕ ರಾಜ್ಯದಲ್ಲಿ ಕೋಮು ಗಲಭೆಗಳಿಗೆ ಸರಕಾರವೇ ಕಾರಣವಾಗುತ್ತಿದೆ. ಇಂತಹ ಕೆಲಸ ಗಳನ್ನು ಮಾಡಿಯೇ ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗುತ್ತಿದೆ. ಕೆಟ್ಟರೂ ಬುದ್ಧಿ ಬಂದಿಲ್ಲ ಎಂಬುದಕ್ಕೆ ಅಲ್ಪಸಂಖ್ಯಾಕರ ಮೇಲಿನ ಪ್ರಕರಣ ಹಿಂಪಡೆದಿರುವುದೇ ನಿದರ್ಶನವಾಗಿದೆ ಎಂದರು.