UK Suddi
The news is by your side.

ಆರೋಗ್ಯ ರಕ್ಷಣೆಗೆ ಕ್ಯಾಲ್ಸಿಯಂ.

ಯಾವ ಸಂಪತ್ತೂ ಆರೋಗ್ಯ ಸಂಪತ್ತಿಗೆ ಸಮವಿಲ್ಲ. ಇತರ ಸಂಪತ್ತಿನಂತೆ ಇದನ್ನು ಕೊಂಡುಕೊಳ್ಳಲೂ  ಆಗಲ್ಲ. ಆರೊಗ್ಯವಿದ್ದರೆ ಉಳಿದೆಲ್ಲ. ನಮ್ಮ ಆರೋಗ್ಯ ನಮ್ಮ ಅಂಗೈಲಿದೆ ಅಂತ ಅನೇಕ ಮಾತುಗಳನ್ನು ಆರೋಗ್ಯದ ಕುರಿತಾಗಿ ಹೇಳುತ್ತ ಮತ್ತು ಕೇಳುತ್ತಲೇ ಇರುತ್ತೇವೆ ಆದರೂ ಇತ್ತೀಚಿನ ದಿನಮಾನಗಳಲ್ಲಿ ಆರೋಗ್ಯ ರಕ್ಷಣೆಯೊಂದು ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ದಾವಂತದ ಬದುಕಿನಲ್ಲಿ ಒಂದು ತಿಂದರೆ ಇನ್ನೊಂದು ತಿನ್ನೊಕೆ ಸಮಯವಿರಲ್ಲ. ತಿಂದಿದ್ದರಲ್ಲಿ ನಮ್ಮ ದೇಹಕ್ಕೆ ಬೇಕಾದ ಎಲ್ಲ ಅಂಶಗಳು ಸಿಗಲ್ಲ ಎನ್ನುವದು ಗಮನಾರ್ಹ.
ಆರೋಗ್ಯವಂತ ಶರೀರಕ್ಕೆ ಆಹಾರದಲ್ಲಿ ಪ್ರೋಟೀನ್ ವಿಟಮಿನ್ ಕಾರ್ಬೋಹೈಡ್ರೆಟ್ ಖನಿಜ ಲವಣಗಳು ಹೇಗೆ ಅವಶ್ಯವೊ ಹಾಗೆಯೇ ಕ್ಯಾಲ್ಸಿಯಂ ಸಹ ಅವಶ್ಯಕ.ನಲವತ್ತರ ಕೆಲವೊಮ್ಮೆ ಮೂವತ್ತರ  ಗಡಿ ದಾಟಿದ ಅನೇಕ ಮಹಿಳೆಯರು ಇದರ ಕೊರತೆಯಿಂದ ಅನೇಕ ಆರೊಗ್ಯದ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.ಮತ್ತು ಪರಿಹಾರಕ್ಕೆ ದಿನ ನಿತ್ಯ ಗುಳಿಗೆಗಳಿಗೆ ಮೊರೆ ಹೋಗುವದನ್ನು ಕಾಣುತ್ತೇವೆ.ಗುಳಿಗೆಗಳ ಬದಲು  ನೈಸರ್ಗಿಕ ಆಹಾರದಲ್ಲಿ ಪಡೆದುಕೊಳ್ಳುವದು ಅತ್ಯತ್ತಮ ಮಾರ್ಗ.

ಹಾಲು ಮತ್ತು ಹಾಲಿನಿಂದ ಮಾಡಿದ ಪದಾರ್ಥಗಳು (ಮೊಸರು ಮಜ್ಜಿಗೆ ಬೆಣ್ಣೆ ಇತ್ಯಾದಿ) ತರಕಾರಿಗಳು ಎಲೆಕೋಸು ಹೂಕೋಸು ಪಾಲಕ ಸೊಪ್ಪು ಮೆಂತ್ಯೆ ಸೊಪ್ಪು ಮೊಟ್ಟೆ ಮೀನು ಮುಂತಾದವುಗಳಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ  ಸಿಗುತ್ತದೆ..ದಿನನಿತ್ಯದ ಕ್ಯಾಲ್ಸಿಯಂುಗಾಗಿ ಇವುಗಳನ್ನು ಬಳಸಬಹುದು.

ಕ್ಯಾಲ್ಸಿಯಮ ನಮ್ಮ ಹಲ್ಲುಗಳನ್ನು ಗಟ್ಟಿಗೊಳಿಸುವದಲ್ಲದೆ ಅವುಗಳಿಗೆ ಹೊಳಪು ಉಂಟು ಮಾಡುತ್ತದೆ. ಇದರಿಂದಲೇ ಕೈ ಕಾಲು ಸೊಂಟ ಇನ್ನಿತರ ಅಂಗಗಳಲ್ಲಿ ಕ್ರಿಯಾಶೀಲತೆ ಉಂಟಾಗುತ್ತದೆ. ಕ್ಯಾಲ್ಸಿಯಂ ಮೂಳೆಗಳಲ್ಲಿ ಸಂಗ್ರಹವಾಗಿರುತ್ತದೆ. ಇದು ಮಾಂಸ ಖಂಡಗಳ ಸಂಕುಚಿತತೆಗೆ ಕಿಣ್ವಗಳ ತಯಾರಿಕೆ ಮತ್ತು ಕೋಶಗಳಲ್ಲಿ ಜೆಲ್ಲಿ (ಅಂಟು ದ್ರವ)ಗಳನ್ನು ನಿಯಮತ್ರಣದಲ್ಲಿಡಲು ಸಹಕರಿಸುವದು. ಜೊತೆಗೆ ಶಾರೀರಿಕ ವೃದ್ಧಿಗೂ ಸಹಾಯ ಮಾಡುವದು. ಶರೀರದಲ್ಲಿನ ಆಮ್ಲ ಮತ್ತು ಕ್ಷಾರಗಳನ್ನು ಹತೋಟಿಯಲ್ಲಿಡುತ್ತದೆ. 

ಶರಿರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಇಲ್ಲವಾದಲ್ಲಿ ಪರಮಾಣು ಪರೀಕ್ಷೆ ವಿಕಿರಣಗಳಿಂದ ಹೊರಡುವ ‘ಸ್ಪ್ರೋನಿಯಂ’ ಪ್ರಭಾವದಿಂದ ಉಳಿಯುವದು ಅಸಾಧ್ಯ ಎಂಬ ಅಂಶ ಸಂಶೋಧನೆಗಳಿಂದ ತಿಳಿದು ಬಂದಿದೆ. 

ಕ್ಯಾಲ್ಸಿಯಂ ಕೊರತೆಯಿಂದ ಶರೀರದ ಕೆಲ ಭಾಗಗಳ ಮೂಳೆಗಳು ದುರ್ಬಲಗೊಳ್ಳುತ್ತವೆ. ಕೆಲವೊಮ್ಮೆ ಮೂಳೆಗಳು ವಿಕಾರಗೊಳ್ಳುವ ಮತ್ತು  ಮುರಿದು ಹೋಗುವ ಸಾಧ್ಯತೆಯೂ ಇದೆ. ಮಾಂಸಖಂಡಗಳು ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತವೆ. ಅನಿಯಂತ್ರಿತ ಸಂಕುಚಿತತೆ ಉಂಟಾಗಿ ಕೈ ಕಾಲು ನಡುಗುವಿಕೆ ಹಾಗೂ ಸೆಳೆತಕ್ಕೆ ಬಲಿಯಾಗಿ ‘ಟಟೈನಿ’ ರೋಗ ಬರುತ್ತದೆ. ಎಳೆ ವಯಸ್ಸು, ಬಾಲ್ಯದಲ್ಲಿ ಕ್ಯಾಲ್ಸಿಯಂ ಕೊರತೆಯಿಂದ ಶ್ರೇಣಿಮೇಖಲಾ (ಪೋಲಿಯಂ ಗಡಗಾರ್) ಎನ್ನುವ ಸಂಕುಚಿತತೆ ಉಂಟಾಗುತ್ತದೆ. ಮಕ್ಕಳಲ್ಲಿ ಹೃದಯಾಘಾತವಾಗುವ ಸಾಧ್ಯತೆಯೂ ಉಂಟು. 

ಶರೀರದಲ್ಲಿ ಸಿಗುವ 1200 ಗ್ರಾಂ ಕ್ಯಾಲ್ಸಿಯಂನಲ್ಲಿ ಸರಾಸರಿ 11 ಭಾಗ ಮೂಳೆಗಳ ಪ್ರದೇಶದಲ್ಲಿ ‘ಕ್ಯಾಲ್ಸಿಯಂ ಪಾಸ್ಪೇಟ್”ಎಂಬ ಲವಣದ ರೂಪದಲ್ಲಿ ಹಾಗೂ ಉಳಿದ ಭಾಗ ಮೃದು ಪ್ರದೇಶ ಮತ್ತು ರಕ್ತದಲ್ಲಿ ದೊರೆಯುತ್ತದೆ. ಇದು ಮಕ್ಕಳ ಬೆಳವಣಿಗೆಗೆ,ಕಾಲಿನ ಹಿಮ್ಮಡಿ ಸಶಕ್ತವಾಗಿರಲು ಸಹಾಯಕ. ಇದರ ಕೊರತೆಯಿಂದಾಗಿ ಮಕ್ಕಳು ಯುವಕರು ಆಟವಾಡುವಾಗ ನೋವನ್ನು ಅನುಭವಿಸುತ್ತಾರೆ. ದಿನನಿತ್ಯ ಎಷ್ಟು ಕ್ಯಾಲ್ಸಿಯಂನ್ನು  ಸೇವಿಸಬೇಕು ಎನ್ನುವದು ಪಿಸಿಎಂಆರ್ ಪ್ರಕಾರ 

ಎಳೆ ಮಕ್ಕಳು-500 ಮಿ ಗ್ರಾಂ 

ಸಣ್ಣ ಮಕ್ಕಳು (ಬಾಲ್ಯ) – 400 ಗ್ರಾಂ

ಕಿಶೋರರು- 600 ಗ್ರಾಂ

ಯುವಕರು – 500 ಗ್ರಾಂ 

ಅತಿಯಾದದ್ದು ಅಮೃತವಾದರೂ ಕಹಿ ಎನ್ನುವಂತೆ ಕ್ಯಾಲ್ಸಿಯಂನ ಹೆಚ್ಚಿನ ಸೇವನೆಯಿಂದ ಮಲಬದ್ಧತೆ ವಾಂತಿಭೇದಿ ಉಂಟಾಗುತ್ತದೆ. ಮಾಂಸಖಂಡಗಳು ಶಿತಿಲಗೊಳ್ಳುತ್ತವೆ. ಹಸಿವು ಕಡಿಮೆಯಾಗುತ್ತದೆ ಆದ್ದರಿಂದ ಸಮತೊಲನದ ಆಹಾರದ ಮೂಲಕ ಕ್ಯಾಲ್ಸಿಯಂನ್ನು ಆರೋಗ್ಯ ರಕ್ಷಣೆಗೆ ಬೇಕಾದ ಪ್ರಮಾಣದಲ್ಲಿ ಸೇವಿಸುವದು ಉತ್ತಮ. 
-ಜಯಶ್ರೀ.ಜೆ. ಅಬ್ಬಿಗೇರಿ. (ಬೆಳಗಾವಿ)

ಆಂಗ್ಲ ಭಾಷಾ ಉಪನ್ಯಾಸಕರು   

ಸ ಪ ಪೂ ಕಾಲೇಜು ಹಿರೇಬಾಗೇವಾಡಿ

ತಾ;ಜಿ: ಬೆಳಗಾವಿ

9449234142


Comments