UK Suddi
The news is by your side.

ಗೋಕಾಕ:ಪೂಜಾ ಹಡಪದ ಅತ್ಯಾಚಾರ ಖಂಡಿಸಿ ಕರವೇ ಪ್ರತಿಭಟನೆ

ಗೋಕಾಕ:ಬೀದರ ಜಿಲ್ಲೆಯ ಬಾಲ್ಕಿ ತಾಲೂಕಿನ ಕೊಸಾಂ ಗ್ರಾಮದ ವಿದ್ಯಾರ್ಥಿನಿ ಪೂಜಾ ಹಡಪದ ಮೇಲೆ ಅತ್ಯಾಚಾರ ವೇಸಗಿ ಕೋಲೆ ಗೈದಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವಿಣ ಶೆಟ್ಟಿ ಬಣ ಮತ್ತು ಹಡಪದ ಯುವ ಸಂಘ ಕಾರ್ಯಕರ್ತರು ಮಂಗಳವಾರದಂದು ಪ್ರತಿಭಟನೆ ನಡೆಸಿದರು.
ಮುಂಜಾನೆ ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಸುಮಾರು ಒಂದು ಘಂಟೆಗೂ ಹೆಚ್ಚುಕಾಲ ರಸ್ತೆ ತಡೆ ನಡೆಯಿಸಿದರು. ಆಕ್ರೋಶವನ್ನು ವ್ಯಕ್ತಪಡಿಸಿದರು.

ಪೂಜಾ ಹಡಪದ ಕುಟುಂಬದ ಸದಸ್ಯರಿಗೆ ಸರಕಾರಿ ಕೆಲಸ ಹಾಗೂ 10ಲಕ್ಷ ಪರಿಹಾರ ಧನ ನೀಡಿವಂತೆ ಆಗ್ರಹಿಸಿದರು
ಪ್ರತಿಭಟನೆಯಲ್ಲಿ ಕರವೇ ಅಧ್ಯಕ್ಷ ಕಿರಣ ಢಮಾಮಗರ , ಹಡಪದ ಯುವ ಸಂಘ ಮತ್ತು ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

Comments