UK Suddi
The news is by your side.

ಜಿಲ್ಲಾ ಮಟ್ಟದ ಸತೀಶ್ ಶುಗರ್ಸ ಕ್ರಿಡಾಕೂಟಕ್ಕೆ ಇಂದು ಚಾಲನೆ

ಬೆಳಗಾವಿ: ಸಾಮಾಜಿಕವಾಗಿ ಹಲವಾರು ಅಭಿವೃದ್ದಿ ಕಾರ್ಯವನ್ನು ಮಾಡುತ್ತಿರುವುದು ಮತ್ತು ಪ್ರತಿಯೊಂದು ಮನೆಯಲ್ಲಿ ಓರ್ವ ಕ್ರೀಡಾ ಪಟುಗಳು ಬೆಳೆಯಬೇಕೆಂಬ ಪ್ರೇರಣೆ ನೀಡುತ್ತಿರುವ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಈ ವೇದಿಕೆಯಿಂದ ಹಲವಾರು ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಜಿ ಬಳಿಗಾರ ಹೇಳಿದರು.
ಗೋಕಾಕ ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಇಂದು ಆರಂಭಗೊಂಡಿರುವ ಸತೀಶ ಜಾರಕಿಹೊಳಿ ಫೌಂಡೇಶನ್ ಪ್ರಾಯೋಜಕತ್ವದ 17ನೇ ಸತೀಶ ಶುಗರ್ಸ್ ಅವಾಡ್ರ್ಸ್ ಬೆಳಗಾವಿ ಜಿಲ್ಲಾ ಮಟ್ಟದ 4 ದಿನಗಳ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಗಲಕೋಟಿಯ ವಿದ್ಯಾಗಿರಿ ಶ್ರೀ ಬಸವೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಗುರುದತ್ತ ಜಿ.ಕೋರಿ ಮಾತನಾಡಿ ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ಸತೀಶ ಶುಗರ್ಸ್ ಅವಾರ್ಡಸ್ ವೇದಿಕೆ ಭದ್ರ ಬುನಾದಿಯಾಗಿದೆ. ಕ್ರೀಡಾ ಪಟುಗಳು ಕಠಿಣ ಪರಿಶ್ರಮ ಪಟ್ಟರೆ ಮಾತ್ರ ಕ್ರೀಡೆಯಲ್ಲಿ ಸಾಧನೆ ಮಾಡಲು ಸಾಧ್ಯ ಹಾಗಾಗಿ ಕ್ರೀಡಾ ಪಟುಗಳು ತಮ್ಮ ಸತತ ಪ್ರಯತ್ನದಿಂದ ಮುಂದೆ ಬಂದು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಈ ನಿಟ್ಟಿನಲ್ಲಿ ಸಾಗಬೇಕೆಂದು ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಕ್ರೀಡಾ ಪಟುಗಳನ್ನು ರಾಜ್ಯ,ರಾಷ್ಟ್ರ ಮತ್ತು ಅಂತರ್ ರಾಷ್ಟ್ರ ಮಟ್ಟದಲ್ಲಿ ಪರಿಚಯಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತು ಕಳೆದ 17 ವರ್ಷಗಳಿಂದ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡುತ್ತಿರುವ ಶಾಸಕರಾದ ಹಾಗು ಕಾರ್ಯಕ್ರಮದ ರೂವಾರಿ ಸತೀಶ ಜಾರಕಿಹೊಳಿ ಅವರ ಕ್ರೀಡಾ ಪ್ರೋತ್ಸಾಹವನ್ನು ಶ್ಲಾಘಿಸಿದ ಅವರು ಈ ಭಾಗದ ಕ್ರೀಡಾ ಪಿತಾಮಹವಾಗಿದ್ದಾರೆ. ಪ್ರತಿಭಾನ್ಚಿತ ಕ್ರೀಡಾಪಟುಗಳು ಸಾಧನೆ ಮಾಡಲು ಶಾಸಕ ಸತೀಶ ಜಾರಕಿಹೊಳಿ ಅವರ ದೂರದೃಷ್ಠಿಯಿಂದ ರಾಷ್ಟ್ರಕ್ಕೆ ಗೌರವ ತರುವಂತಹ ಕಾರ್ಯ ಮಾಡುತ್ತಿದ್ದು ಕ್ರೀಡಾಪಟುಗಳಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿಲ್ಲ ಆದರೂ ಬೆಳಗಾವಿ ಜಿಲ್ಲೆಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಮತ್ತು ಸಹಾಯ ನೀಡುವ ಮಹತ್ತರ ಹೆಜ್ಜೆಯಾಗಿದೆ. ಇದು ಕ್ರೀಡಾಕೂಟವಲ್ಲ ಕ್ರೀಡೋತ್ಸವ, ಕ್ರೀಡಾ ಹಬ್ಬವಾಗಿದೆ. ಕ್ರೀಡೆಯು ಜೀವನದ ಸರ್ವಾಂಗೀಣ ಬೆಳವಣಿಗೆಗೆ ಒಂದು ಅವಿಭಾಜ್ಯ ಅಂಗವಾಗಿದೆ. ಸದೃಢ ದೇಶ ಕಟ್ಟಲು ಕ್ರೀಡಾಪಟುಗಳು ಮುಂದೆ ಬರಬೇಕೆಂದರು. ಖೇಲೋ ಗೋಕಾಕದಿಂದ ಖೇಲೋ ಇಂಡಿಯಾಯಾಗಿದೆ. ಜಾತಿ, ಮತ,ಪಂಥ,ಧರ್ಮಕ್ಕೆ ಸೀಮಿತವಲ್ಲದ ಕ್ಷೇತ್ರವಿದ್ದರೆ ಅದು ಕ್ರೀಡಾ ಕ್ಷೇತ್ರವಾಗಿದೆ. ಕ್ರೀಡಾ ಪಟುಗಳನ್ನು ತಯಾರಿಸಲು ಕ್ರೀಡಾಶಾಲೆಯನ್ನು ತೆರೆಯಬೇಕೆಂದು ಮನವಿ ಮಾಡಿಕೊಂಡರು.

ಕಳೆದ ಸಾಲಿನ ಸಮಗ್ರ ವೀರಾಗ್ರಣಿ ಪ್ರಶಸ್ತಿ ವಿಜೇತರುಗಳಾದ ಯಮನಕನಮರ್ಡಿ ಸಿಇಎಸ್ ಪ್ರಾಥಮಿಕ ಶಾಲೆಯ ನಮೃತಾ ಶೇಲಾರ ಹಾಗೂ ಹಾರೂಗೇರಿಯ ಎಚ್.ವಿ.ಎಚ್ ಪ್ರೌಢಶಾಲೆ ಮಾಳಪ್ಪ ಯಲ್ಲಟ್ಟಿ ಮಾತನಾಡಿ ಸತೀಶ ಶುಗರ್ಸ್ ಅವಾಡ್ರ್ಸ್ ಕ್ರೀಡಾಕೂಟದಲ್ಲಿ ಶಾಸಕರಾದ ಸತೀಶ ಜಾರಕಿಹೊಳಿ ಅವರ ಪ್ರೋತ್ಸಾಹದಿಂದಾಗಿ ರಾಷ್ಟ್ರ ಮಟ್ಟದಲ್ಲಿ ಬೆಳೆಯಲು ಈ ವೇದಿಕೆ ನಮಗೆ ದಾರಿದೀಪವಾಗಿದೆ. ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯವಲ್ಲ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘಟಕರಾದ ಎಸ್.ಎ.ರಾಮಗಾನಟ್ಟಿ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ.ಗಂಗಾಧರ, ಎಸ್.ಎ.ನಾಡಗೌಡರ, ರಿಯಾಜ ಚೌಗಲಾ, ಜಗದೀಶ ಉಮರಾಣಿ, ಆರ್.ಬಿ.ಗೋಕಾಕ, ಎಸ್.ಆರ್.ಶಿಂಧೆ, ವೈ.ಎಂ.ಶಿಂಧೆ, ಎಲ್.ಎಂ.ಕುರೇರ, ವಿ.ಆರ್.ಜೋಶಿ, ಎಂ.ಬಿ.ಸನದಿ, ಅರ್ಜುನ ಬಡಿಗೇರ ಸೇರಿದಂತೆ ಜಿಲ್ಲೆಯ ದೈಹಿಕ ಪರೀವಿಕ್ಷಕರು ಹಾಗೂ ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.

Comments