ತಳಿ ಮತ್ತು ತಳಿಕೋಶವಿಜ್ಞಾನ ರಾಷ್ಟ್ರೀಯ ವಿಚಾರ ಸಂಕಿರಣ
ಧಾರವಾಡ: ಕೃಷಿ ವಿಶ್ವವಿದ್ಯಾಲಯದ ಡಾ.ಎಸ್.ಎಮ್.ಮೆಣಸಿನಕಾಯಿ ಮೆಮೋರಿಯಲ್ ಮತ್ತು ಶಿಕ್ಷಣ ಸಂಶೋಧನಾ ಮಂಡಳಿಯ ವತಿಯಿಂದ ತಳಿ ವಿಜ್ಞಾನ ಮತ್ತು ತಳಿಕೋಶ ವಿಜ್ಞಾನ ಕುರಿತು ಎರಡನೇ ರಾಷ್ಟ್ರೀಯ ವಿಚಾರ ಸಂಕಿರಣ ಫೆ.1 ರಂದು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10 ಗಂಟೆಗೆ ರೈತರ ಜ್ಞಾನ ಕೇಂದ್ರದಲ್ಲಿ ಉದ್ಘಾಟನೆಯಾಗಲಿದೆ.
ಕಾರ್ಯಕ್ರಮವನ್ನು ಕೃಷಿ ವಿವಿಯ ವಿಶ್ರಾಂತ ಉಪಕುಲಪತಿ ಡಾ.ಜೆ.ವಿ.ಗೌಡ್ ಅವರು ಉದ್ಘಾಟಿಸುವರು. ಕೃಷಿ ವಿವಿಯ ಕುಲಪತಿ ಡಾ.ಡಿ.ಪಿ.ಬಿರಾದರ ಅಧ್ಯಕ್ಷತೆ ವಹಿಸುವರು. ಐಸಿಎಆರ್ ಮತ್ತು ದಕ್ಷಿಣ ಮತ್ತು ಮಧ್ಯ ಏಷ್ಯಾದ ಬಯೋವರ್ಸಿಟಿ ಇಂಟರ್ ನ್ಯಾಷನಲ್ ಪ್ರಾದೇಶಿಕ ಪ್ರತಿನಿಧಿಯಾದ ಡಾ.ಕೃಷ್ಣ ಕುಮಾರ ಎನ್.ಕೆ ಅವರು ಭಾಗವಹಿಸುವರು.
ವಿಶ್ವವಿದ್ಯಾಲಯದ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಎಸ್ಡಬ್ಲೂಎಮ್ಎಫ್ನ ಉಪಾಧ್ಯಕ್ಷರು ಹಾಗೂ ಎಸಿಡಿ ಡೀನ್ ಡಾ.ಆರ್.ಎಸ್.ಗಿರಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.