UK Suddi
The news is by your side.

ಸದ್ಗುರು ಸಿದ್ಧಾರೂಢರ ದರ್ಶನ ಪಡೆದ ಜನಾರ್ದನ ರೆಡ್ಡಿ ಕುಟುಂಬ.

ಹುಬ್ಬಳ್ಳಿ: ಜನಾರ್ದನ ರೆಡ್ಡಿ  ಹುಬ್ಬಳ್ಳಿಯ ಸದ್ಗುರು ಸಿದ್ಧಾರೂಢ ಮಠಕ್ಕೆ ಬೇಟಿ ನೀಡಿದ್ದಾರೆ. ಕುಟುಂಬ ಸಮೇತರಾಗಿ ಆಗಮಿಸಿದ ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಅರುಣಾ ಸದ್ಗುರು ಸಿದ್ದಾರೂಢ ಸ್ವಾಮಿಯ ಗದ್ದುಗೆ ದರ್ಶನ ಪಡೆದರು.

ಪತಿ ಪತ್ನಿಗಳಿಬ್ಬರು ಶ್ರದ್ಧಾ ಭಕ್ತಿಯಿಂದ ಸಿದ್ಧಾರೂಢರಿಗೆ ಪೂಜೆ ಸಲ್ಲಿಸಿದರು.ಇದೇ ವೇಳೆ ದಂಪತಿಯನ್ನು ಶ್ರೀ ಸದ್ಗುರು ಸಿದ್ಧಾರೂಢ ಮಠದ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಭೇಟಿ ನಂತರ ಅನಂದ್ ಸಿಂಗ್ ಕಾಂಗ್ರೇಸ್ ಸೇರ್ಪಡೆ ಕುರಿತು ಮಾತನಾಡಿದ ಜನಾರ್ದನ ರೆಡ್ಡಿ ಇದು ರಾಜಕೀಯದ ಆಟ, ರಾಜಕೀಯದಲ್ಲಿ ಇದೆಲ್ಲಾ ಸರ್ವೆ ಸಾಮಾನ್ಯ ಎಂದರು.

ಆನಂದ್ ಸಿಂಗ್ ಕಾಂಗ್ರೆಸ್ಸ್ ಪಕ್ಷ ಸೇರ್ಪಡೆ ಆಗುವದರಿಂದ ಬಳ್ಳಾರಿಯಲ್ಲಿ ಬಿಜೆಪಿಗೆ ಯಾವುದೇ ನಷ್ಟವಿಲ್ಲ.ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿದೆ, ಶ್ರೀರಾಮುಲು ಜಿಲ್ಲೆಯಲ್ಲಿ ಚುನಾವಣೆ ಎದುರಿಸಲಿದ್ದಾರೆ ಎಂದರು.

Comments