UK Suddi
The news is by your side.

ಕಡಲೆ ಖರೀದಿ ಪ್ರಮಾಣ ಹೆಚ್ಚಿಸಲು ಪ್ರಯತ್ನಿಸುವೆ : ಸಚಿವ ವಿನಯ ಕುಲಕರ್ಣಿ.

ಧಾರವಾಡ: ಸರಕಾರವು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್ ಕಡಲೆಗೆ 4400 ರಂತೆ ಪ್ರತಿ ರೈತರಿಂದ 10 ಕ್ಷಿಂಟಾಲ್ ಖರೀದಿಸಲು ಆರಂಭಿಸಿದೆ. ಆದರೆ ರೈತರು ಖರೀದಿ ಪ್ರಮಾಣ ಹೆಚ್ಚಿಸಲು ಕೇಳುತಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.
ಅವರು ಇಂದು ಧಾರವಾಡ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಕಡಲೆ ಕಾಳು ಖರೀದಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಹೆಚ್ಚಿನ ವೆಚ್ಚ ಮಾಡಿ ರೈತರು ಕಡಲೆಕಾಳು ಉತ್ಪಾದನೆ ಮಾಡಿದ್ದಾರೆ. ಆದರೆ ಈಗಿನ ದರ ಕಡಿಮೆಯಾಗಿದೆ. ಕಡಲೆಕಾಳು ದರ ಕುಸಿತಕ್ಕೆ ಹೊರದೇಶಗಳಿಂದ ಕಡಲೆಕಾಳು ಆಮದು ಮಾಡಿಕೊಂಡಿರುವದೇ ಕಾರಣವಾಗಿದೆ. ಒಬ್ಬ ರೈತನ ಒಂದು ಖಾತೆಗೆ ಗರಿಷ್ಠ ಹತ್ತು ಕ್ವಿಂಟಲ್ ಮಾತ್ರ ಕಡಲೆಕಾಳು ಖರೀದಿಗೆ ಅವಕಾಶವಿದೆ. ಇದನ್ನು ಸಹ ಕನಿಷ್ಠ 20 ಕ್ವಿಂಟಲ್‍ಗೆ ಹೆಚ್ಚಿಸಲು ಸರಕಾರಕ್ಕೆ ವಿನಂತಿಸುತ್ತೇನೆ ಎಂದು ಸಚಿವರು ತಿಳಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಪೂರೈಸಲಾಗುವುದು. ರಸ್ತೆ ಕಾಮಗಾರಿ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಅಗತ್ಯ ಸೇವೆಗಳನ್ನು ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಪಿಎಮ್‍ಸಿ ಮಾಜಿ ಅಧ್ಯಕ್ಷ ರಮೆಶ ತಳಗೇರಿ,ಎಪಿಎಮ್‍ಸಿ ಅಧ್ಯಕ್ಷ ಸಿದ್ದಣ್ಣ ಪ್ಯಾಟಿ,ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪಾಧ್ಯಕ್ಷ ರಾಯಪ್ಪ ಹುಡೆದ, ಸದಸ್ಯರಾದ ಮಹಾವೀರ ಜೈನ, ಎಸ್.ಎನ್.ಸುರೇಬಾನ, ಎಚ್.ಆರ್.ಸನದಿ, ಶ್ರೀಮತಿ ರೇಣುಕಾ ಕಳ್ಳಿಮನಿ, ಶ್ರೀಮತಿ ಅಕ್ಕಮ್ಮ ಕುಮಾರ ದೇಸಾಯಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Comments