ಗಂಗಾವತಿ:ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಇಕ್ಬಾಲ್ ಅನ್ಸಾರಿ.
ಕೊಪ್ಪಳ:ಇಂದು ಗಂಗಾವತಿ ನಗರದ 25 ನೇ ವಾರ್ಡನಲ್ಲಿ 1ಕೋಟಿ 75 ಲಕ್ಷ ರೂಪಾಯಿಯ ಸಿ.ಸಿ ರಸ್ತೆ ಹಾಗೂ ಸಿ.ಸಿ.ಚರಂಡಿ ಕಾಮಗಾರಿಗೆ ಶಾಸಕರಾದ ಇಕ್ಬಾಲ್ ಅನ್ಸಾರಿ ಅವರು ಪೂಜೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರದ 25ನೇ ವಾರ್ಡನ ನಗರಸಭೆ ಸದಸ್ಯರಾದ ಶ್ರೀಮತಿ ರಾಧಾ ಬಸವರಾಜ ಐಲಿ,ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿಯಾದ ಬಸವರಾಜ ಐಲಿ, ಮಾಜಿ ನಗರಸಭೆ ಅಧ್ಯಕ್ಷರಾದ ಶ್ಯಾಮೀದ್ ಮನಿಯಾರ್,ಕಾಸಿಂಸಾಬ್ ಗದ್ವಾಲ್,ಮನೋಹರ ಸ್ವಾಮಿ ಹಿರೇಮಠ,ಕಮ್ಲೀಬಾಬ, ನಾಗರಾಜ ನಂದಾಪುರ, ದೇವಪ್ಪ ಕಾಮದೊಡ್ಡಿ, ಜಗನ್ನಾಥ ಆಲಂಪಲ್ಲಿ, ಹಾಗೂ ಲಿಟಲ್ ಹಾರ್ಟ್ಸ್ ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಹಾಗೂ ವಾರ್ಡನ ಮುಖಂಡರು ಉಪಸ್ಥಿತರಿದ್ದರು.